ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ: ಕಾಮಿಡಿ ಕಿಲಾಡಿ ಸ್ಟಾರ್ ನಟ ಮಡೆನೂರು ಮನು ವಿರುದ್ಧ FIR!

ಬೆಂಗಳೂರು:- ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕಾಮಿಡಿ ಕಿಲಾಡಿ ಸ್ಟಾರ್ ನಟ ಮಡೆನೂರು ಮನು ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ನಟನ ವಿರುದ್ಧ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಎಫ್ಐಆರ್ನಲ್ಲೇನಿದೆ?
ಸಂತಸ್ತೆಗೆ ಮನು ನಾಗರಭಾವಿಯಲ್ಲಿ ಬಾಡಿಗೆ ಮನೆ ಹುಡುಕಿಕೊಟ್ಟಿದ್ದ. 2018ರಿಂದಲೂ ಮನುವಿನ ಪರಿಚಯ ಸಂತ್ರಸ್ತೆಗೆ ಇತ್ತು. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದರು. ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು. ಮನುಗೆ ಮದುವೆ ಆಗಿ ಒಂದು ಮಗು ಕೂಡ ಇದೆ ಅನ್ನೋದು ಶಾಕಿಂಗ್ ವಿಚಾರ.
ಒಮ್ಮೆ ಶಿಕಾರಿಪುರಕ್ಕೆ ಹೋದಾಗ ಹೋಟೆಲ್ ರೂಂಗೆ ಮನು ನಟಿಯನ್ನು ಕರೆಸಿಕೊಂಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಅವರು ಆರೋಪಿಸಿದ್ದಾರೆ. ಈ ವೇಳೆ ಅವರು ಪ್ರೆಗ್ನೆಂಟ್ ಕೂಡ ಆಗಿದ್ದರು. ಆ ಬಳಿಕ ಮನು ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದರು.
ಮಡೆನೂರು ಮನು, ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಹೊತ್ತಲ್ಲೇ ನಟನ ಮೇಲೆ ಎಫ್ಐಆರ್ ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






