ಮನೆಯಲ್ಲಿ ಇರುವೆಗಳ ಕಾಟವೇ? ಹಾಗಿದ್ರೆ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಓಡಿ ಹೋಗತ್ತೆ!

ಜುಲೈ 22, 2025 - 07:01
 0  16
ಮನೆಯಲ್ಲಿ ಇರುವೆಗಳ ಕಾಟವೇ? ಹಾಗಿದ್ರೆ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಓಡಿ ಹೋಗತ್ತೆ!

ಮನೆಯೊಳಗೆ ಒಂದು ಇರುವೆ ಬಂದರೆ ಸಾಕು ಅದರ ಹಿಂದೆ ಇನ್ನಷ್ಟು ಇರುವೆಗಳು ಸಾಲು ಸಾಲಾಗಿ ಬರುತ್ತದೆ. ಅಡುಗೆ ಮನೆಯಲ್ಲಿ, ಆಹಾರಗಳು ಮತ್ತು ಅಡುಗೆ ಪಾತ್ರೆಗಳ ಹತ್ತಿರ ಹರಿದಾಡುವ ಈ ಇರುವೆಗಳನ್ನು ಓಡಿಸಲು ಕೆಲವೊಮ್ಮೆ ಕಷ್ಟವಾಗಬಹುದು. ಅಂತಹ ವೇಳೆ ಇರುವೆಗಳನ್ನು ಓಡಿಸಲು ರಾಸಾಯನಿಕ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಚಿಕ್ಕ ಮಕ್ಕಳಿರುವ ಮನೆಗಳಲ್ಲಿ ಇದನ್ನು ಬಳಸುವುದು ಅಪಾಯಕಾರಿ ಆಗಿದೆ. ಇದನ್ನು ತಪ್ಪಿಸಲು ಕೆಮಿಕಲ್ ಮುಕ್ತ ಕೆಲ ಮನೆಮದ್ದನ್ನು ಬಳಸಬಹುದು. ಹಾಗಾದ್ರೆ ಇದಕ್ಕಾಗಿ ಏನು ಮಾಡಬೇಕೆಂದು ನೋಡೋಣ ಬನ್ನಿ.

ಮನೆ ಅಂದ ಮೇಲೆ ಅಲ್ಲಿ ಕೇವಲ ಮನುಷ್ಯರು ಮಾತ್ರ ವಾಸ ಮಾಡುತ್ತಾರೆ ಎನ್ನುವ ಹಾಗಿಲ್ಲ! ಮನುಷ್ಯ ಜೊತೆಗೆ ಸೊಳ್ಳೆಗಳು, ಜಿರಳೆಗಳು, ಹಲ್ಲಿಗಳು, ಇರುವೆಗಳು, ಇನ್ನೂ ಹಲವಾರು ಜೀವಿಗಳು ಕುಟುಂಬದ ಸದಸ್ಯರಾಗಿ ಮನುಷ್ಯರ ಜೊತೆ ಬೆರೆತು ಹೋಗಿರುತ್ತವೆ.

ಸಾಧಾರಣವಾಗಿ ಇವುಗಳ ಜೊತೆಗೆ ಜೀವನ ನಡೆಸುವುದು ಜನರಿಗೆ ಕಿರಿಕಿರಿ ಉಂಟುಮಾಡುತ್ತದೆ. ಹಾಗಾಗಿ ಇವುಗಳನ್ನು ಮನೆಯಿಂದ ಓಡಿಸಲು ವಿವಿಧ ಬಗೆಯ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಆದರೆ ಮಕ್ಕಳಿರುವ ಮನೆಯಲ್ಲಿ ರಾಸಾಯನಿಕ ವಸ್ತುಗಳನ್ನು ಮಾಡುವುದು ಸರಿಯಲ್ಲ ಇದರಿಂದ ಮಕ್ಕಳ ಆರೋಗ್ಯ ಜೊತೆಗೆ ದೊಡ್ಡವರಿಗೂ ಇದರಿಂದ ಸಮಸ್ಯೆ ಉಂಟಾಗಬಹುದು.

ಕಲವೊಮ್ಮೆ ಮನೆಯ ಸದಸ್ಯರಂತೆ ಓಡಾಡುವ ಜಿರಲೆಗಳನ್ನು ಓಡಿಸಲು ಆಗಾಗ ಮನೆಯಲ್ಲಿ ಲಕ್ಷ್ಮಣರೇಖೆ, ಜಿರಳೆ ಸ್ಪ್ರೇ ಇತ್ಯಾದಿಗಳನ್ನು ಉಪಯೋಗಿಸುತ್ತಾರೆ, ಆದರೆ ಇರುವೆಗಳು ಈ ತಂತ್ರಗಳಿಗೆ ಮಣಿಯುವುದಿಲ್ಲ. ಹಾಗಾಗಿ ನಾವು ಬೇರೆಯದೇ ತಂತ್ರಗಳನ್ನು ರೂಪಿಸಬೇಕಾಗುತ್ತದೆ

ಸಾಮಾನ್ಯವಾಗಿ ಇರುವೆಗಳಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡದಿದ್ದರೂ ಕೂಡ, ಮನೆಯ ಮೂಲೆಗಳಲ್ಲಿ ಸಾಲಾಗಿ ಓಡಾಡುತ್ತಿದ್ದರೆ ಸ್ವಲ್ಪ ಕಿರಿಕಿರಿ ಅನಿಸಿಬಿಡುತ್ತದೆ! ಅಷ್ಟೇ ಅಲ್ಲದೆ ನಾವು ಶೇಖರಿಸಿ ಇಟ್ಟ ಸಿಹಿ ಪದಾರ್ಥಗಳಿಗೆ ಇರುವೆಗಳು ಮುತ್ತಿಕೊಂಡು ಮತ್ತೆ ನಾವು ಅದನ್ನು ತಿನ್ನದಂತೆ ಮಾಡಿ ಬಿಡುತ್ತವೆ. ಹಾಗಾಗಿ ಇರುವೆಗಳಿಂದ ಹೇಗಾದರೂ ಮುಕ್ತಿ ಪಡೆದುಕೊಳ್ಳಬೇಕು ಎನಿಸುತ್ತದೆ. ಆದ್ದರೆ ಆ ಕ್ಷಣಕ್ಕೆ ಇದು ಹೇಗೆ ಸಾಧ್ಯ ಎಂದು ಗೊಂದಲಕ್ಕೆ ಒಳಗಾಗಬೇಕಾಗುತ್ತದೆ

ಸಿಟ್ರಿಕ್ ಅಂಶಗಳನ್ನು ಹೆಚ್ಚಾಗಿ ಹೊಂದಿರುವ ಈ ನಿಂಬೆ ಹಣ್ಣು ಇರುವೆಗಳನ್ನು ಓಡಿಸಲು ಪರಿಣಾಮಕಾರಿ ಕಾರ್ಯ ನಿರ್ಹಿಸುತ್ತದೆ. ಒಂದು ಬೌಲ್‍‌ನಲ್ಲಿ ಎರಡು ಮೂರು ಟೇಬಲ್ ಚಮಚ ಆಗುವಷ್ಟು ನಿಂಬೆ ರಸ ತಗೊಂಡು, ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು, ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ. ಹೀಗೆ ಮಾಡುವುದರಿಂದ ಇರುವೆಗಳು ಬೇಗನೇ ಅಲ್ಲಿಂದ ಜಾಗ ಖಾಲಿ ಮಾಡಿಬಿಡುತ್ತದೆ. 

ಇಲ್ಲಾಂದರೆ ಹೀಗೂ ಮಾಡಬಹುದು, ಮೊದಲು ಇರುವೆಗಳು ಮನೆಗೆ ಪ್ರವೇಶಿಸುವ ಜಾಗವನ್ನು ಪತ್ತೆ ಮಾಡಿಕೊಳ್ಳಿ. ಆ ಬಳಿಕ ನೀರು ಬಳಿಸಿರುವಂತಹ ಲಿಂಬೆಯ ಸಿಪ್ಪೆಯನ್ನು ಆ ಜಾಗದಲ್ಲಿ ಇಟ್ಟುಬಿಡಿ. ಯಾಕೆಂದರೆ ಇರುವೆಗಳಿಗೆ ನಿಂಬೆಯ ವಾಸನೆಯು ಹಿಡಿಸದು! ಇದರಿಂದ ಕೂಡ ಇರುವೆಗಳು ಮನೆಯ ಕಡೆ ತಲೆನೂ ಹಾಕಲ್ಲ!

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow