ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿ ಇಡಬೇಕು ಗೊತ್ತಾ!? ಜ್ಯೋತಿಷ್ಯ ಹೇಳುವುದು ಹೀಗೆ!

ನಮ್ಮ ಜೀವನದಲ್ಲಿ ಸಮಯ ಬಹಳ ಮುಖ್ಯ. ಒಮ್ಮೆ ಹೋದರೆ ಮತ್ತೆ ಬರುವುದಿಲ್ಲ. ಮನೆಯಲ್ಲಿ ಮತ್ತು ಕಚೇರಿಯಲ್ಲಿ ಗಡಿಯಾರ ಮಾತ್ರ ಸರಿಯಾದ ಸಮಯವನ್ನು ಹೇಳುತ್ತದೆ. ವಾಸ್ತು ಶಾಸ್ತ್ರದಲ್ಲಿ ಗಡಿಯಾರದ ಮಹತ್ವ ಅಷ್ಟೇ ಅನನ್ಯ.
ಗಡಿಯಾರವನ್ನು ಎಲ್ಲಿ ಮತ್ತು ಹೇಗೆ ಇಡಬೇಕು. ಇದರ ಬಗ್ಗೆ ಹಲವು ಉಲ್ಲೇಖಗಳೂ ಇವೆ. ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಎಂಬ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿದೆ. ಇದಕ್ಕೆಲ್ಲಾ ಉತ್ತರ ಈ ಲೇಖನದಲ್ಲಿದೆ ಓದಿ.
ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡುವುದಕ್ಕೂ ವಾಸ್ತು ನಿಯಮಗಳಿವೆ. ಸರಿಯಾದ ದಿಕ್ಕು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಹಾಗಾದರೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು? ಯಾವ ದಿಕ್ಕಿನಲ್ಲಿ ಇರಿಸಿದರೆ ಏನು ಲಾಭ ಎನ್ನುವುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ವಾಸ್ತು ನಿಯಮದ ಪ್ರಕಾರ, ಗಡಿಯಾರವನ್ನು ಮನೆಯ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇಡಬಾರದು, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೇ ಗಡಿಯಾರವನ್ನು ಬಾಗಿಲಿನ ಮೇಲೆಯೂ ಇಡಬಾರದು, ಇನ್ನೊಂದು ಮುಖ್ಯ ಸಂಗತಿಯೆಂದರೆ ಗಡಿಯಾರವು ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು.
ಇದಲ್ಲದೇ ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತು ಹಾಕುವುದು ಶುಭ, ಇದು ಸಂಪತ್ತು ಹಾಗೂ ಸಮೃದ್ಧಿಗೆ ಮುನ್ನುಡಿಯನ್ನು ಬರೆಯುತ್ತದೆಂದು ಹೇಳಲಾಗುತ್ತದೆ. ಉತ್ತರ ದಿಕ್ಕನ್ನು ಕುಬೇರ ಮೂಲೆ ಹಾಗೂ ಗಣೇಶನ ಮೂಲೆಯೆಂದು ಕರೆಯುತ್ತಾರೆ. ಹಾಗಾಗಿ ಈ ಮೂಲೆಯಲ್ಲಿಡುವುದರಿಂದ ವೃತ್ತಿಜೀವನ ಹಾಗೂ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವಿರಿ.
ವಾಸ್ತು ಶಾಸ್ತ್ರದಲ್ಲಿ ಗೋಡೆಯ ಗಡಿಯಾರವನ್ನು ಉತ್ತರ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೇತು ಹಾಕುವುದು ಶುಭವೆಂದು ಉಲ್ಲೇಖಿಸಲಾಗಿದೆ. ಇದರಿಂದ ಕೆಲಸ ಮಾಡುವಾಗ ಗಡಿಯಾರವನ್ನು ನೋಡಲು ಸುಲಭವಾಗುತ್ತದೆ, ಇಷ್ಟು ಮಾತ್ರವಲ್ಲದೇ ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುತ್ತದೆ
ಗಡಿಯಾರವನ್ನು ಪೂರ್ವದಿಕ್ಕಿನಲ್ಲಿ ನೇತು ಹಾಕುವುದರಿಂದ ಕೆಲಸ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಪೂರ್ವದಿಕ್ಕು ನಾವು ಮಾಡುವ ಕಾರ್ಯಗಳನ್ನು ಉತ್ತಮಗೊಳಿಸುವುದರಿಂದ, ಗಡಿಯಾರವನ್ನಿಡಲು ಪೂರ್ವ ದಿಕ್ಕೂ ಸೂಕ್ತವಾಗಿದೆ. ನಿಮ್ಮ ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇಡಬೇಕೆಂದು ಬಯಸಿದರೆ, ಗೋಡೆಯ ಗಡಿಯಾರವನ್ನಿಡಲು ಸೂಕ್ತ ದಿಕ್ಕು ಪೂರ್ವ. ಆದರೆ ಪೂರ್ವದಿಕ್ಕಿನಲ್ಲಿ ಸಾಧ್ಯವಾಗದಿದ್ದರೆ ಉತ್ತರ ಮೂಲೆಯಲ್ಲಿ ಇಡಬಹುದು.
ದಕ್ಷಿಣಕ್ಕೆ ಮುಖ ಮಾಡಿ ಮಲಗುವ ಅಭ್ಯಾಸವಿದ್ದರೆ ನೀವು ನಿಮ್ಮ ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ಇರಿಸಬೇಕು. ಮಲಗುವ ಕೋಣೆಯಲ್ಲಿ ಗಡಿಯಾರವನ್ನು ಇರಿಸುವುದಾದರೆ ನಿಮ್ಮ ಹಾಸಿಗೆಯು ಗಡಿಯಾರದ ಕನ್ನಡಿಯಲ್ಲಿ ಪ್ರತಿಫಲಿಸುವಂತೆ ಇರಬಾರದು. ಗಡಿಯಾರವು ಎಂದಿಗೂ ಮಲಗುವ ಕೋಣೆಯ ಬಾಗಿಲಿಗೆ ವಿರುದ್ಧ ದಿಕ್ಕಿನಲ್ಲಿರಬಾರದು.
ಲೋಲಕವಿರುವ ಗಡಿಯಾರಗಳನ್ನು ಮನೆಗೆ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಧನಾತ್ಮಕತೆ ಹಾಗೂ ಧ್ವನಿಯ ಕಂಪನಗಳನ್ನು ಸೃಷ್ಟಿಸುವುದು. ನೀವು ಇಂತಹ ಗಡಿಯಾರವನ್ನು ಇಡಲು ಬಯಸಿದರೆ ಪೂರ್ವ ದಿಕ್ಕು ಅತ್ಯಂತ ಸೂಕ್ತ. ನೀವು ಗಡಿಯಾರವನ್ನು ಪಶ್ಚಿಮ ದಿಕ್ಕಿನ ಗೋಡೆಯಲ್ಲಿ ಇರಿಸಬಹುದು ಆದರೆ ಮೇಲೆ ತಿಳಿಸಿದಂತಹ ದಿಕ್ಕುಗಳು ಮೊದಲ ಆಯ್ಕೆಯಾಗಿದ್ದು, ಪಶ್ಚಿಮ ದಿಕ್ಕನ್ನು ಕೊನೆಯ ಆಯ್ಕೆಯಾಗಿ ಪರಿಗಣಿಸಿ.
ಮನೆಯಲ್ಲಿ ಗೋಡೆ ಗಡಿಯಾರದ ಹೊರತಾಗಿ ಕೆಲವೊಂದು ವಿಷಯಗಳನ್ನೂ ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಗೋಟೆ ಗಡಿಯಾರ ಹಾಗೂ ಕ್ಯಾಲೆಂಡರ್‌ಗಳಂತಹ ವಸ್ತುಗಳನ್ನು ಯಾವಾಗಲೂ ಮನೆಯ ಒಳಗೆಯೇ ಇರಿಸಬೇಕು. ಎಂದಿಗೂ ಮನೆಯ ಹೊರಗೆ ತೂಗು ಹಾಕಬಾರದು. ಅಲ್ಲದೇ ಎಲ್ಲಾ ಗಡಿಯಾರಗಳು ಕಾರ್ಯನಿರ್ವಹಿಸುತ್ತಿರಬೇಕು. ಸ್ಥಗಿತಗೊಂಡ, ಕೆಟ್ಟು ಹೋದ ಗೋಡೆ ಗಡಿಯಾರಗಳನ್ನು ಎಂದಿಗೂ ಬಳಸಬೇಡಿ. ಇನ್ನೊಂದು ಮುಖ್ಯ ಅಂಶವೆಂದರೆ ಗೋಡೆ ಗಡಿಯಾರದ ಸಮಯವು ನೈಜ ಸಮಯಕ್ಕಿಂತ ಹಿಂದಿರಬಾರದು. ವಾಸ್ತವವಾಗಿ ಎರಡು ಅಥವಾ ಮೂರು ನಿಮಿಷ ಮುಂದಿದ್ದರೆ ಒಳ್ಳೆಯದು.
ನೀವು ಗಾಜಿನ ಗಡಿಯಾರವನ್ನು ಹೊಂದಿದ್ದರೆ , ಗಾಜು ಒಡೆದು ಹೋದ ಗಡಿಯಾರಗಳನ್ನು ಇಡಬೇಡಿ. ಗಡಿಯಾರಗಳನ್ನುಬ ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಅದರ ಮೇಲೆ ಯಾವುದೇ ಕೊಳೆ ಅಥವಾ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ. ಗಡಿಯಾರವನ್ನು ಖರೀದಿಸುವಾಗ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ, ಒಂಟಿತನವನ್ನು ಚಿತ್ರಿಸುವ ಗಡಿಯಾರ ಕೊಳ್ಳಬೇಡಿ
ನಿಮ್ಮ ಪ್ರತಿಕ್ರಿಯೆ ಏನು?






