ಮಲತಾಯಿ ಕ್ರೂರ ಕೃತ್ಯ: ಪುಟ್ಟಕಂದಮ್ಮನನ್ನ ಮೂರನೇ ಮಹಡಿಯಿಂದ ತಳ್ಳಿ ಕೊಲೆ!
ಬೀದರ್: ಮಲತಾಯಿಯೊಬ್ಬಳು 7 ವರ್ಷದ ಶಾನವಿ ಎಂಬ ಬಾಲಕಿಯನ್ನು ಮೂರನೇ ಮಹಡಿಯಿಂದ ತಳ್ಳಿ ಜೀವ ತೆಗೆದಿರುವ ಭಯಾನಕ ಘಟನೆ ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಆಗಸ್ಟ್ 27ರಂದು ನಡೆದಿದ್ದು, ಸಿಸಿಟಿವಿ ದೃಶ್ಯ ಹೊರಬಿದ್ದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಶಾನವಿಯ ತಾಯಿ 6 ವರ್ಷಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿದ್ದರು. ಬಳಿಕ ತಂದೆ ಸಿದ್ಧಾಂತ, 2023ರಲ್ಲಿ ರಾಧಾಳೊಂದಿಗೆ ಮರುಮದುವೆಯಾಗಿದ್ದರು.
ಇವರಿಗೆ ಅವಳಿ ಮಕ್ಕಳು ಹುಟ್ಟಿದ ನಂತರ, ಶಾನವಿ ತೊಂದರೆ ಎನಿಸುತ್ತಿದ್ದಾಳೆಂದು 2ನೇ ಪತ್ನಿ ರಾಧಾ ಬಾಲಕಿಯನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆ ಹೇಳುತ್ತದೆ. ಆಗಸ್ಟ್ 27ರಂದು ಶಾನವಿ ಬಿದ್ದು ಸತ್ತಳು ಎಂದು ಕುಟುಂಬಸ್ಥರು ನಂಬಿದ್ದರು. ಆದರೆ ಪಕ್ಕದ ಮನೆಯವರು ಸೆಪ್ಟೆಂಬರ್ 12ರಂದು ತಂದೆಗೆ ವಾಟ್ಸಾಪ್ ಮೂಲಕ ಕಳುಹಿಸಿದ ಸಿಸಿಟಿವಿ ದೃಶ್ಯದಲ್ಲಿ,
ರಾಧಾ ಬಾಲಕಿಯನ್ನು ಮೇಲ್ಮಹಡಿಗೆ ಕರೆದುಕೊಂಡು ಹೋಗಿ ಸಂಶಯಾಸ್ಪದವಾಗಿ ಓಡಾಡಿದ ದೃಶ್ಯ ಸೆರೆಯಾಗಿದೆ. ಮೇಲ್ಮಹಡಿಯಲ್ಲಿ ಖುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಶಾನವಿಯನ್ನ ಕೂರಿಸಿರೊದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಮೃತ ಬಾಲಕಿ ಅಜ್ಜಿ, ರಾಧಾ ವಿರುದ್ಧ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?