ಮಾರ್ಟಿನ್’ ಸಿನಿಮಾಗೆ ವೀಕ್ಷಕರ ಮಿಶ್ರ ಪ್ರತಿಕ್ರಿಯೆ: ಒಟ್ಟಾರೆ ಕಲೆಕ್ಷನ್ ಎಷ್ಟು ಗೊತ್ತಾ!?

ಮಾರ್ಟಿನ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ‘ಕೆಜಿಎಫ್ 2’, ‘ಕಾಂತಾರ’ ರೀತಿಯಲ್ಲೇ ನಿರೀಕ್ಷೆ ಇಟ್ಟುಕೊಂಡು ಪರಭಾಷಿಗರು ‘ಮಾರ್ಟಿನ್’ ನೋಡಲು ಹೋಗಿದ್ದರು. ಆದರೆ, ಅವರಿಗೆ ನಿರಾಸೆ ಆಗಿದೆ. ಆದರೆ, ಚಿತ್ರತಂಡದ ‘ಮಾರ್ಟಿನ್’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳುತ್ತಲೇ ಬರುತ್ತಿದೆ.
ಮಾರ್ಟಿನ್’ ಸಿನಿಮಾ ಮೊದಲ ದಿನ 6.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಎಂದು sacnilk ಹೇಳಿತ್ತು. ಅದೇ ರೀತಿ ಎರಡನೇ ದಿನ 5.5 ಕೋಟಿ ರೂಪಾಯಿ ಹಾಗೂ ಮೂರನೇ ದಿನ 3.35 ಕೋಟಿ ರೂಪಾಯಿ ಗಳಿಕೆ ಆಗಿತ್ತು. ನಾಲ್ಕನೇ ದಿನ ಚಿತ್ರ 1.35 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ಯವಾಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಸುಮಾರು 17 ಕೋಟಿ ರೂಪಾಯಿ ಆಗಿದೆ.
ಮಾರ್ಟಿನ್’ ಸಿನಿಮಾ ತಂಡ ಅಕ್ಟೋಬರ್ 14ರಂದು ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ತಂಡದವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪರಭಾಷೆಯಿಂದಲೂ ಚಿತ್ರಕ್ಕೆ ಮೆಚ್ಚುಗೆ ಸಿಗುತ್ತಿದೆ ಎನ್ನುವ ಅಭಿಪ್ರಾಯವನ್ನು ಅವರು ಹೊರಹಾಕುತ್ತಿದ್ದಾರೆ. ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಅವರು ದ್ವಿಪಾತ್ರ ಮಾಡಿದ್ದಾರೆ. ಅವರ ನಟನೆ ಫ್ಯಾನ್ಸ್ಗೆ ಇಷ್ಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






