ಮುರುಘಾ ಶ್ರೀ ಜೈಲಿಂದ ಬಿಡುಗಡೆ: ಸತ್ಯಕ್ಕೆ ಜಯ ಸಿಗುತ್ತದೆಂಬ ನಿರೀಕ್ಷೆ ನಮಗಿದೆ ಎಂದ ಶ್ರೀಗಳು!

ಅಕ್ಟೋಬರ್ 7, 2024 - 18:02
 0  19
ಮುರುಘಾ ಶ್ರೀ ಜೈಲಿಂದ ಬಿಡುಗಡೆ: ಸತ್ಯಕ್ಕೆ ಜಯ ಸಿಗುತ್ತದೆಂಬ ನಿರೀಕ್ಷೆ ನಮಗಿದೆ ಎಂದ ಶ್ರೀಗಳು!

ಚಿತ್ರದುರ್ಗಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮುರುಘಾಶ್ರೀಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಇನ್ನು ಜೈಲಿನಿಂದ ಮುರುಘಾ ಶ್ರೀ ಬಿಡುಗಡೆಯಾಗುತ್ತಿದ್ದಂತೆಯೇ ಕಾರಾಗೃಹ ಬಳಿ ಹಾರ ಹಾಕಿ  ಭಕ್ತರು ಸ್ವಾಗತಿಸಿದರು. ದಾವಣಗೆರೆ ವಿರಕ್ತಮಠದ ಬಸವಪ್ರಭುಶ್ರೀ ಸೇರಿ ಹಲವರು ಉಪಸ್ಥಿತಿ ಇದ್ದರು.   ಬಸವಪ್ರಭುಶ್ರೀ,‌ ಮಠದ ಉತ್ತರಾಧಿಕಾರಿ ಬಸವಾದಿತ್ಯ ಮುರುಘಾಶ್ರೀ ಕಾಲಿಗೆ ನಮಸ್ಕರಿಸಿದರು. ಬಳಿಕ ಶ್ರೀಗಳು ಭಕ್ತರತ್ತ ಕೈಬೀಸಿ ದಾವಣಗೆರೆಗೆ  ತೆರಳಿದರು. 

ಬಿಡುಗಡೆ ಬಳಿಕ ಹೇಳಿಕೆ ನೀಡಿದ ಮುರುಘಾ ಶ್ರೀ, ನಮ್ಮ ವಿರುದ್ಧದ ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ. ಸತ್ಯಕ್ಕೆ ಜಯ ಸಿಗುತ್ತದೆಂಬ ನಿರೀಕ್ಷೆ ನಮಗಿದೆ. ಬಸವೇಶಮತ್ತು ಮುರುಘೇಶನ ಆಶೀರ್ವಾದದಿಂದ. ಇಂದು ಬಂಧೀಖಾನೆಯಿಂದ ನಾವು ಬಿಡುಗಡೆ ಆಗಿದ್ದೇವೆ. ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಹೋಗುತ್ತೇವೆ. ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ವೇಳೆ ಬಿಡುಗಡೆಗೊಂಡಿದ್ದೇವೆ. ನೋಡೋಣ ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣ. ಜೈಲಿನ ಅನುಭವದ ಬಗ್ಗೆ ಮುಂದೆ ಹೇಳುತ್ತೇವೆ. ಇದು ಸಕಾಲ ಅಲ್ಲ, ಮೌನ ವಹಿಸುವಂತ ಕಾಲವಿದು ಎಂದರು

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow