ಯತ್ನಾಳ್ ಉಚ್ಚಾಟನೆ: ಪಕ್ಷದ ನಿರ್ಣಯ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ - ರಮೇಶ್ ಜಾರಕಿಹೊಳಿ!

ಬೆಳಗಾವಿ:- ಬಿಜೆಪಿಯಿಂದ ಶಾಸಕ ಯತ್ನಾಳ್ ರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಯತ್ನಾಳ್ ಉಚ್ಚಾಟನೆಯ ಯತ್ನ ಒಂದು ತಿಂಗಳಿಂದ ನಡೆದಿತ್ತು. ನಮಗೆ ಮೊದಲೇ ಸುದ್ದಿ ಇತ್ತು. ಹೈಕಮಾಂಡ್ ಜೊತೆಗೆ ನಿನ್ನೆ ರಾತ್ರಿ ಮಾತನಾಡಿದ್ದೇನೆ. ಪಕ್ಷಕ್ಕೆ ಯತ್ನಾಳ್ ನ್ಯಾಯುತವಾಗಿ ದುಡಿದಿದ್ದಾರೆ. ಇದು ವಿರೋಧಿ ಬಣಕ್ಕೂ ಎಚ್ಚರಿಕೆ ಗಂಟೆಯಾಗಿದ್ದು ಯತ್ನಾಳ್ ಮತ್ತೆ ಬಿಜೆಪಿಗೆ ವಾಪಸ್ ಬರುತ್ತಾರೆ ಎಂದು ಹೇಳಿದರು.
ಯತ್ನಾಳ್ ಅವರು ಪಕ್ಷದ ದೊಡ್ಡ ನಾಯಕರು. ಇವತ್ತು ನಮ್ಮ ಪಕ್ಷ ನಿರ್ಧಾರ ಯಾಕೆ ತೆಗೆದುಕೊಂಡಿದೆ ಗೊತ್ತಿಲ್ಲ. ಪಕ್ಷದ ನಿರ್ಣಯ ಪ್ರಶ್ನಿಸುವ ದೊಡ್ಡ ವ್ಯಕ್ತಿ ನಾನಲ್ಲ. ನಾಳೆ ಎಲ್ಲ ನಾಯಕರು ಬೆಂಗಳೂರಿನಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಯತ್ನಾಳ್ ಕಡೆಯಿಂದ ಹೈಕಮಾಂಡ್ಗೆ ಪತ್ರ ಬರೆಸುತ್ತೇವೆ. ಪುನಃ ಮರುಪರಿಶೀಲನೆ ಮಾಡುತ್ತೇವೆ ಮನವಿ ಮಾಡುತ್ತೇವೆ. ಯತ್ನಾಳ್ ಆಗಲಿ ನಾನಾಗಲಿ ನಮ್ಮ ಟೀಂ ಆಗಲಿ ಬಿಜೆಪಿಯಲ್ಲೇ ಮುಂದುವರೆಯುತ್ತೇವೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






