ಯುವತಿಯ ಖಾಸಗಿ ಅಂಗ ಮುಟ್ಟಿ ಲೈಂಗಿಕ ದೌರ್ಜನ್ಯ! ಕಾಮುಕ ಅರೆಸ್ಟ್

ಸೆಪ್ಟೆಂಬರ್ 15, 2025 - 10:44
 0  15
ಯುವತಿಯ ಖಾಸಗಿ ಅಂಗ ಮುಟ್ಟಿ  ಲೈಂಗಿಕ ದೌರ್ಜನ್ಯ! ಕಾಮುಕ ಅರೆಸ್ಟ್

ಬೆಂಗಳೂರು: ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಪ್ರಕರಣದಲ್ಲಿ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 7 ರಾತ್ರಿ 11.50 ಸುಮಾರಿಗೆ ಜಕ್ಕೂರು ಮುಖ್ಯರಸ್ತೆಯಲ್ಲಿ ಶ್ವಾನವೊಂದು ಅಪಘಾತಕ್ಕೊಳಗಾಗಿತ್ತು. ಅದನ್ನು ರಕ್ಷಿಸಲು ಯುವತಿ ತನ್ನ ಕಾರು ನಿಲ್ಲಿಸಿ ಮುಂದಾಗಿದ್ದಳು. ವೇಳೆ ಆಕೆಯ ಕೈಗೆ ಗಾಯವಾಗಿ ರಕ್ತ ಬಂದ ಕಾರಣ ಹತ್ತಿರದ ಪೆಟ್ರೋಲ್ ಬಂಕ್ ಬಳಿ ಕೈ ತೊಳೆಯುತ್ತಿದ್ದರು.

ಅಂದೇ ಬೈಕ್ನಲ್ಲಿ ಬಂದಿದ್ದ ಆರೋಪಿ ಮಂಜುನಾಥ್, ಯುವತಿಗೆ ಬ್ಯಾಡ್ ಟಚ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಕೆಲವೇ ಹೊತ್ತಿನ ಬಳಿಕ ಮತ್ತೆ ಬಂದು ಯುವತಿಯ ಖಾಸಗಿ ಅಂಗ ಮುಟ್ಟಿ ಮತ್ತೊಮ್ಮೆ ಪರಾರಿಯಾದನು.

ಕುರಿತು ಯುವತಿ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow