ರಸ್ತೆಬದಿ ಸಿಗುವ ಮೆಮೊಸ್ ತಿನ್ನುವವರೇ ಇಲ್ಲಿ ಕೇಳಿ: ಫುಡ್ ತಿಂದ ಓರ್ವ ಸಾವು!

ಹೈದರಾಬಾದ್:- ರಸ್ತೆಬದಿ ಸಿಗುವ ಮೆಮೊಸ್ ತಿನ್ನುವವರೇ ನೀವು ನೋಡಲೇಬೇಕಾದ ಸ್ಟೋರಿ ಇದು. ರಸ್ತೆ ಬದಿಯ ಸ್ಟಾಲ್‌ನಿಂದ ಮೊಮೊಸ್ ತಿಂದ ಮಹಿಳೆಯೊಬ್ಬರು ದುರ್ಮರಣ ಹೊಂದಿ, 20 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.
ಈ ಬಗ್ಗೆ ಪೊಲೀಸರು ಮಾತನಾಡಿ, ವಿವಿಧ ಸ್ಥಳಗಳಲ್ಲಿ ಒಂದೇ ಮಾರಾಟಗಾರರಿಂದ ಮೆಮೊಸ್ ಸೇವಿಸಿ ರೇಷ್ಮಾ ಬೇಗಂ ಎಂಬ 33 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಇತರ 15 ಮಂದಿಗೆ ಫುಡ್ ಪಾಯ್ಸನ್ ಆಗಿದೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ
ಆರೋಪಿಗಳು ಅದೇ ಮಾರಾಟಗಾರರಿಂದ ತಯಾರಿಸಿದ ಮೊಮೊಗಳನ್ನು ಸೇವಿಸಿದ್ದಾರೆ. ಆದರೆ ಕಳೆದ ವಾರ ಬಂಜಾರ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






