ಬಳ್ಳಾರಿ ಜನರಲ್ಲಿ ಹಕ್ಕಿ ಜ್ವರ ಆತಂಕ: 5 ಚೆಕ್ʼಪೋಸ್ಟ್ ನಿರ್ಮಾಣ ಮಾಡಿದ ಜಿಲ್ಲಾಡಳಿತ

ಬಳ್ಳಾರಿ ಜನರಲ್ಲಿ ಹಕ್ಕಿ ಜ್ವರ ಆತಂಕ ಎದುರಾಗಿದೆ. ಸಮಾಧಾನದ ವಿಚಾರ ಏನೆಂದರೆ ಕೇಂದ್ರ ಒಂದು ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಹಳ್ಳಿಗಳು, ಜನವಸತಿ ಪ್ರದೇಶಗಳಿಲ್ಲ. 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಖಾಸಗಿ ಕೋಳಿ ಫಾರ್ಮ್ಗಳು ಕೂಡ ಇಲ್ಲ. ಆದ್ರೂ ಕೂಡ ಜಿಲ್ಲಾಡಳಿತವು ಆಂಧ್ರದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಹಕ್ಕಿ ಜ್ವರ ಪತ್ತೆ ಹಿನ್ನೆಲೆ ಅಲರ್ಟ್ ಆಗಿರುವ ಜಿಲ್ಲಾಡಳಿತವು, ಜಿಲ್ಲೆಯಾದ್ಯಂತ 5 ಚೆಕ್ಪೋಸ್ಟ್ಗಳ ನಿರ್ಮಾಣ ಮಾಡಿದೆ. ಪ್ರಮುಖವಾಗಿ ಆಂಧ್ರಪ್ರದೇಶದ ಅನಂತಪುರ ಹಾಗೂ ಗುಂತಕಲ್ ಭಾಗದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಜಿಲ್ಲಾಡಳಿತ ಕಣ್ಣಿಟ್ಟಿದೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಪಿಡಿಹಳ್ಳಿ ಗ್ರಾಮದಲ್ಲೂ ಚೆಕ್ ಪೋಸ್ಟ್ ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






