ರೇಣುಕಾಸ್ವಾಮಿ ಕೊಲೆ ಕೇಸ್: ಜೈಲಿನಿಂದ ಎ13 ಆರೋಪಿ ದೀಪಕ್ ಬಿಡುಗಡೆ.!

ಬೆಂಗಳೂರು: ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಒಟ್ಟು 17 ಮಂದಿ ಜೈಲುವಾಸ ಅನುಭವಿಸುತ್ತಿದ್ದರು. ಆದರೆ ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಎ13 ಆರೋಪಿ ದೀಪಕ್ ಕುಮಾರ್ ಬಿಡುಗಡೆಯಾಗಿದ್ದಾನೆ. ಕಳೆದ ಸೋಮವಾರ ಕೋರ್ಟ್‌ನಲ್ಲಿ ದೀಪಕ್ ಕುಮಾರ್‌ಗೆ ಜಾಮೀನು ಮಂಜೂರಾಗಿತ್ತು.
ಕೋರ್ಟ್ ನೀಡಿರುವ ಷರತ್ತುಗಳನ್ನು ಪೂರೈಸಿ ಜೈಲಿಗೆ ಬೇಲ್ ಕಾಪಿ ತಲುಪಿತ್ತು. ಬುಧವಾರ ರಾತ್ರಿ ಬೇಲ್ ಕಾಪಿ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಕೈಸೇರಿತ್ತು. ಈ ಹಿನ್ನೆಲೆ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ದೀಪಕ್ ಕುಮಾರ್ ಬಿಡುಗಡೆಯಾಗಿದ್ದಾನೆ.
ಇನ್ನೂ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಬಂಧನಕ್ಕೆ ಒಳಗಾಗಿ ನಾಲ್ಕು ತಿಂಗಳು ಕಳೆದಿವೆ. ಚಾರ್ಜ್ಶೀಟ್ ಸಲ್ಲಿಕೆ ಬಳಿಕ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಅವರು ಜಾಮೀನಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಲೇ ಬಂದಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಕೊಡಲು ನಿರಾಕರಿಸಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






