ರೋಹಿತ್, ಕೊಹ್ಲಿ ನಿವೃತ್ತಿಯ ಹಿಂದೆ BCCI ರಾಜಕೀಯವೇ? ಮಾಜಿ ವೇಗಿಯ ಗಂಭೀರ ಆರೋಪ

ಆಗಸ್ಟ್ 18, 2025 - 09:17
 0  11
ರೋಹಿತ್, ಕೊಹ್ಲಿ ನಿವೃತ್ತಿಯ ಹಿಂದೆ BCCI ರಾಜಕೀಯವೇ? ಮಾಜಿ ವೇಗಿಯ ಗಂಭೀರ ಆರೋಪ

ಭಾರತೀಯ ಕ್ರಿಕೆಟ್ ಇಬ್ಬರು ದಂತಕಥೆಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಹಿನ್ನೆಲೆಯಲ್ಲಿ ಮಾಜಿ ವೇಗಿ ಕರ್ಸನ್ ಘಾವ್ರಿ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಿಕಿ ಲಾಲ್ವಾನಿ ಶೋನಲ್ಲಿ ಮಾತನಾಡಿದ ಘಾವ್ರಿ, “ವಿರಾಟ್ ಕೊಹ್ಲಿ ಇನ್ನೂ ಕನಿಷ್ಠ ಎರಡು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬಹುದಾಗಿತ್ತು. ಆದರೆ ಬಿಸಿಸಿಐ ಮತ್ತು ಆಯ್ಕೆದಾರರ ಆಂತರಿಕ ರಾಜಕೀಯದ ಪರಿಣಾಮವಾಗಿ, ರೋಹಿತ್ ಮತ್ತು ಕೊಹ್ಲಿ ನಿವೃತ್ತಿ ಘೋಷಿಸಲು ಬಲವಂತಗೊಂಡಿದ್ದಾರೆಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರು ಮುಂದುವರಿಸಿ, “ಒಬ್ಬ ಮಹಾನ್ ಕ್ರಿಕೆಟಿಗನಿಗೆ ವಿದಾಯದ ಪಂದ್ಯವನ್ನಾಡುವ ಅವಕಾಶ ನೀಡದಿರುವುದು ಬೇಸರ ತಂದಿದೆ. ಕೊಹ್ಲಿಯ ಹಠಾತ್ ನಿವೃತ್ತಿ ನಿಗೂಢ. ಯಾರೋ ಒತ್ತಡ ಹೇರಿದ್ದರಿಂದಲೇ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸಮಯಕ್ಕಿಂತ ಮೊದಲೇ ನಿವೃತ್ತರಾಗಿದ್ದಾರೆಎಂದು ಹೇಳಿದ್ದಾರೆ.

ಹೀಗಾಗಿ ಇವರಿಬ್ಬರು ಸಮಯಕ್ಕಿಂತ ಮೊದಲೇ ನಿವೃತ್ತರಾಗಲು ಬಹುಶಃ ಇವರುಗಳೇ ಕಾರಣಗಳಾಗಿರಬಹುದು ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಕೂಡ ಸಮಯಕ್ಕಿಂತ ಮೊದಲೇ ನಿವೃತ್ತರಾದರು. ರೋಹಿತ್ರನ್ನು ಬಲವಂತವಾಗಿ ನಿವೃತ್ತಿ ಘೋಷಿಸುವಂತೆ ಮಾಡಲಾಯಿತು. ಇದು ಒಂದು ರೀತಿಯ ಕ್ಷುಲ್ಲಕ ರಾಜಕೀಯದ ಪ್ರಕರಣಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow