ಲಿವಿಂಗ್ ಟುಗೆದರ್'ನಲ್ಲಿದ್ದ ಮಹಿಳೆಯನ್ನು ಬೆಂಕಿ ಹಚ್ಚಿ ಹತ್ಯೆಗೈದ ಪ್ರಿಯಕರ.!
ಬೆಂಗಳೂರು: ನಗರದ ಹೊರವಲಯ ಹುಳಿಮಾವು ಬಳಿ ನಡೆದ ಭೀಕರ ಘಟನೆ ನಡೆದಿದೆ. ಕ್ತಿಯೋರ್ವ ತನ್ನ ಲಿವ್ ಇನ್ ಗೆಳತಿಯನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿರುವ ಘಟನೆ ನಡೆದಿದೆ. ಮೃತಳನ್ನು ವನಜಾಕ್ಷಿ (26) ಎಂದು ಗುರುತಿಸಲಾಗಿದ್ದು,
ಆರೋಪಿ ವಿಠ್ಠಲ (52) ಕ್ಯಾಬ್ ಚಾಲಕನಾಗಿದ್ದಾನೆ. ಮಳೆನಲ್ಲಸಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಇಬ್ಬರು ಲಿವ್ ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದರು. ಆದರೆ, ವನಜಾಕ್ಷಿ ಬೇರೊಬ್ಬರೊಂದಿಗೆ ಸಂಬಂಧ ಬೆಳೆಸುತ್ತಿದ್ದಾಳೆ ಎಂಬ ಶಂಕೆಯಿಂದ ವಿಠ್ಠಲ ಆಕೆಯನ್ನು ಹಿಂಬಾಲಿಸುತ್ತಿದ್ದನು. ಇತ್ತೀಚೆಗೆ ವನಜಾಕ್ಷಿ ಬೇರೊಬ್ಬನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದುದನ್ನು ಕಂಡ ವಿಠ್ಠಲ ಆಕೆಯ ಕಾರಿಗೆ ಅಡ್ಡಗಟ್ಟಿ ವಾಗ್ವಾದ ನಡೆಸಿದನು.
ಬಳಿಕ ತನ್ನ ಕಾರಿನಲ್ಲಿ ತಂದಿದ್ದ 5 ಲೀಟರ್ ಪೆಟ್ರೋಲ್ ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದನು. ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವನಜಾಕ್ಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೆಪ್ಟೆಂಬರ್ 1ರಂದು ಮೃತಪಟ್ಟಿದ್ದಾಳೆ. ಈ ಘಟನೆ ಸಂಬಂಧ ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಠ್ಠಲನನ್ನು ಬಂಧಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?