ಲೈಂಗಿಕ ದೌರ್ಜನ್ಯ ಪ್ರಕರಣ: ಟಿ20 ಲೀಗ್​​​ನಿಂದ ಟೀಮ್ ಇಂಡಿಯಾ ವೇಗಿ ನಿಷೇಧ!?

ಆಗಸ್ಟ್ 10, 2025 - 14:44
 0  12
ಲೈಂಗಿಕ ದೌರ್ಜನ್ಯ ಪ್ರಕರಣ: ಟಿ20 ಲೀಗ್​​​ನಿಂದ ಟೀಮ್ ಇಂಡಿಯಾ ವೇಗಿ ನಿಷೇಧ!?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗಿ ಯಶ್ ದಯಾಳ್ ವಿರುದ್ಧ 17 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು, ಉತ್ತರ ಪ್ರದೇಶದ ಗಾಝಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿನ್ನೆಲೆಯಲ್ಲಿ ಅವರ ಬಂಧನ ಸಾಧ್ಯತೆ ಹೆಚ್ಚಿದೆ.

ಆರೋಪಗಳ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಯಶ್ ದಯಾಳ್ ಅವರನ್ನು ಮುಂಬರುವ ಉತ್ತರ ಪ್ರದೇಶ ಟಿ20 ಲೀಗ್ನಿಂದ ನಿಷೇಧಿಸಿದೆ. ಗೋರಖ್ಪುರ ಲಯನ್ಸ್ ಪರ ಕಣಕ್ಕಿಳಿಯಬೇಕಿದ್ದ ದಯಾಳ್ ಅವರನ್ನು ಫ್ರಾಂಚೈಸಿಯಿಂದ ಕೈ ಬಿಡುವಂತೆ ಸೂಚಿಸಲಾಗಿದೆ. ಕಳೆದ ಹರಾಜಿನಲ್ಲಿ ಗೋರಖ್ಪುರ ಲಯನ್ಸ್ ತಂಡವು ಅವರನ್ನು ₹7 ಲಕ್ಷಕ್ಕೆ ಖರೀದಿಸಿತ್ತು.

ಐಪಿಎಲ್ನಲ್ಲಿ ಆರ್ಸಿಬಿ ಪರ 15 ಪಂದ್ಯಗಳಲ್ಲಿ ಆಡಿದ ದಯಾಳ್ ಒಟ್ಟು 13 ವಿಕೆಟ್ ಕಬಳಿಸಿದ್ದರು. ಆದರೆ, ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಅವರ ಕ್ರೀಡಾ ಭವಿಷ್ಯ ಈಗ ಸಂಕಷ್ಟಕ್ಕೆ ಸಿಲುಕಿದೆ. ರಾಜಸ್ಥಾನ ಹೈಕೋರ್ಟ್ನಲ್ಲಿ ಬಂಧನ ತಪ್ಪಿಸಿಕೊಳ್ಳಲು ಮನವಿ ಸಲ್ಲಿಸಿದರೂ, ನ್ಯಾಯಾಲಯವು ಪೊಲೀಸ್ ಕ್ರಮಕ್ಕೆ ತಡೆ ನೀಡಲು ನಿರಾಕರಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow