Irfan Pathan: ಅಫ್ಘಾನ್ʼಗೆ ರಣರೋಚಕ ಗೆಲುವು: ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್ ವೈರಲ್

ಫೆಬ್ರವರಿ 28, 2025 - 09:14
 0  13
Irfan Pathan: ಅಫ್ಘಾನ್ʼಗೆ ರಣರೋಚಕ ಗೆಲುವು: ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್ ವೈರಲ್

ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನ್ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಇದು ಕೇವಲ ಒಂದು ಗುಂಪು ಪಂದ್ಯವಾಗಿದ್ದರೂ, ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ವಿರುದ್ಧದ ಗೆಲುವು ಅವರಿಗೆ ಅಪಾರ ಸಂತೋಷವನ್ನು ನೀಡಿತು. ಅದೂ ಸಹ, ಹೆಚ್ಚಿನ ಸ್ಕೋರ್‌ಗಳ ಪಂದ್ಯದಲ್ಲಿ, ಕೊನೆಯವರೆಗೂ ನರಗಳನ್ನು ಕೆಡಿಸುವ ಸಸ್ಪೆನ್ಸ್ ನಡುವೆ ಅದ್ಭುತ ಗೆಲುವಿನೊಂದಿಗೆ, ಅಫ್ಘಾನಿಸ್ತಾನದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಬೀದಿಗಿಳಿದು ಆಚರಿಸಿದರು.

ಇದರ ಬೆನ್ನಲ್ಲೇ ಅಫ್ಘಾನಿಸ್ತಾನ್ ತಂಡದ ಈ ರೋಚಕ ಗೆಲುವಿನ ಬೆನ್ನಲ್ಲೇ ಇರ್ಫಾನ್ ಪಠಾಣ್ ಅಫ್ಘಾನ್ ಸ್ಟೈಲ್ ಡ್ರೆಸ್​​ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಫ್ಘಾನಿಸ್ತಾನ್ ತಂಡವನ್ನು ಅಭಿನಂದಿಸಿದ್ದಾರೆ.

ಈ ವಿಡಿಯೋಗೆ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಪ್ರತಿಕ್ರಿಯಿಸಿದ್ದು, ನಾನಿಲ್ಲದೇ ನೀವು ಡ್ಯಾನ್ಸ್ ಮಾಡಿದ್ದು ತಪ್ಪು ಎಂದು ಕಾಲೆಳೆದಿದ್ದಾರೆ. ಅಲ್ಲದೆ ಇರ್ಫಾನ್ ಪಠಾಣ್ ಅವರ ಬೆಂಬಲಕ್ಕೆ ಧನ್ಯವಾದವನ್ನು ಸಹ ಅರ್ಪಿಸಿದ್ದಾರೆ.

ಈ ಹಿಂದೆ 2023ರ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡವನ್ನು ಬಗ್ಗು ಬಡಿದ ಅಫ್ಘಾನಿಸ್ತಾನ್ ತಂಡದ ಜೊತೆ ಇರ್ಫಾನ್ ಪಠಾಣ್ ಮೈದಾನದಲ್ಲೇ ಡ್ಯಾನ್ಸ್ ಮಾಡಿದ್ದರು. ಅಲ್ಲದೆ ಅಫ್ಘಾನಿಸ್ತಾನದ ಬಹುತೇಕ ಆಟಗಾರರು ಇರ್ಫಾನ್ ಪಠಾಣ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿಯೇ ಅಫ್ಘಾನ್ ತಂಡದ ಗೆಲುವನ್ನು ನೃತ್ಯದೊಂದಿಗೆ ಟೀಮ್ ಇಂಡಿಯಾದ ಮಾಜಿ ಆಲ್​ರೌಂಡರ್ ಸಂಭ್ರಮಿಸಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow