ವಾಶ್ ರೂಂನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ನಟ ಆಶಿಶ್ ಕಪೂರ್ ಅರೆಸ್ಟ್!

ಸೆಪ್ಟೆಂಬರ್ 4, 2025 - 20:03
 0  11
ವಾಶ್ ರೂಂನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ನಟ ಆಶಿಶ್ ಕಪೂರ್ ಅರೆಸ್ಟ್!

ಪುಣೆ: ಕಿರುತೆರೆ ನಟ ಆಶಿಶ್ ಕಪೂರ್ ಅವರನ್ನು ಪುಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ. ಆಗಸ್ಟ್ ತಿಂಗಳ ಎರಡನೇ ವಾರದಲ್ಲಿ ದೆಹಲಿಯ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸಂತ್ರಸ್ತೆಯ ಮೇಲೆ ವಾಶ್ರೂಮ್ನಲ್ಲಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಇದೆ.

 ಮೊದಲಿಗೆ ಆಶಿಶ್ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ನಂತರ ಸಂತ್ರಸ್ತೆ ಆಶಿಶ್ ಕಪೂರ್ ಮಾತ್ರ ಆರೋಪಿಯೆಂದು ಹೇಳಿಕೊಂಡಿದ್ದಾರೆ.

ಸಂತ್ರಸ್ತೆ ಘಟನೆಯನ್ನು ರೆಕಾರ್ಡ್ ಮಾಡಿರುವುದಾಗಿ ಹೇಳಿದರೂ, ಪೊಲೀಸರಿಗೆ ಯಾವುದೇ ವೀಡಿಯೊ ಸಿಕ್ಕಿಲ್ಲ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಆಶಿಶ್ ಕಪೂರ್ ಕಿರುತೆರೆಯ ಜೊತೆಗೆ ಇಂಕಾರ್, ಕುರ್ಬಾನ್, ಟೇಬಲ್ ನಂ. 21 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow