ಸರ್ಕಾರದ ಜೊತೆಗಿನ ಸಂಧಾನ ಸಫಲ: ರಾಜ್ಯ ಸಾರಿಗೆ ನೌಕರರ ಮುಷ್ಕರ ಕ್ಯಾನ್ಸಲ್

ಡಿಸೆಂಬರ್ 30, 2024 - 10:01
 0  8
ಸರ್ಕಾರದ ಜೊತೆಗಿನ ಸಂಧಾನ ಸಫಲ: ರಾಜ್ಯ ಸಾರಿಗೆ ನೌಕರರ ಮುಷ್ಕರ ಕ್ಯಾನ್ಸಲ್

  ಕೆಎಸ್​​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರ 38 ತಿಂಗಳ ಅರಿಯರ್ಸ್ ಹಣ ನೀಡಿಲ್ಲ. ಜನವರಿಯಲ್ಲೇ ಸಂಬಳ ಹೆಚ್ಚಳ‌ ಮಾಡಬೇಕಿತ್ತು. ಆದರೆ ನವೆಂಬರ್ ಬಂದರೂ ಈ ಬಗ್ಗೆ ಯಾವುದೇ ‌ಸುಳಿವಿಲ್ಲ. ಈ ಹಿನ್ನೆಲೆಯಲ್ಲಿ ಜಂಟಿ ಕ್ರಿಯಾ ಸಮಿತಿ ಬೆಳಗಾವಿ ಅಧಿವೇಶನದಲ್ಲಿ ಸಿಎಂಗೆ ನೋಟಿಸ್ ನೀಡುವ ಮೂಲಕ ಸಾರಿಗೆ ಮುಷ್ಕರಕ್ಕೆ ‌ಸಿದ್ಧತೆ ಮಾಡಿಕೊಂಡಿತ್ತು.

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ‌ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆ ಬೆನ್ನಲ್ಲೇ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರ ಹಿಂಪಡೆದಿದೆ. ಆ ಮೂಲಕ ಡಿ.31ರಂದು ಎಂದಿನಂತೆ ಸಾರಿಗೆ ಸಂಸ್ಥೆ ಬಸ್​ಗಳು ರಸ್ತೆಗಿಳಿಯಲಿವೆ.  ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಮಾತನಾಡಿದ್ದು,

ನಮ್ಮ ಬೇಡಿಕೆಗಳಾದ 38 ತಿಂಗಳ ಹರಿಯರ್ಸ್, ಜ. 1 ರಿಂದ ವೇತನ ಒಪ್ಪಂದ ಮಾಡಲಾಗಿದೆ. ಅದರ ಬಗ್ಗೆ ಸಿಎಂ ಸಿದ್ದರಾಮಯ್ಯ ನಮ್ಮ ಜೊತೆಗೆ ಮಾತಾಡುತ್ತಾರೆ. ನಾವು ಈಗಾಗಲೇ ಹೇಳಿದ್ದೇವೆ ಸಿಎಂ ಮಟ್ಟದಲ್ಲಿ ಮಾತಾಡಿದ್ರೆ ಸಮಸ್ಯೆ ಬಗಹರಿಯುತ್ತದೆ ಎಂದು. ಸಿಎಂ ಸಭೆ ಕರೆಯುತ್ತಾರೆ ಎಂದು ಸಚಿವ ರಾಮಲಿಂಗ ರೆಡ್ಡಿ ನಮಗೆ ಪತ್ರ ಕಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಾವು ಮುಷ್ಕರ ವಾಪಸ್ಸು ಪಡೆದುಕೊಂಡಿದ್ದೇವೆ ಎಂದಿದ್ದಾರೆ. ನೌಕರರಿಗೆ ನಾವು ಕರೆ ಕೊಡುತ್ತಿದ್ದೇವೆ ಎಲ್ಲರೂ ನಾರ್ಮಲ್ ಆಗಿ ಡ್ಯೂಟಿ ಮಾಡಿ. ಸಿಎಂ ಆದಷ್ಟು ಬೇಗ ನಮ್ಮ ಜೊತೆಗೆ ಸಭೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡುತ್ತೇವೆ ಎಂದಿದ್ದಾರೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow