ಸರ್ಕಾರಿ ಕೆಲಸ ಬೇಕಾ!? ಜಸ್ಟ್ 10 ಪಾಸಾಗಿದ್ರೆ ಸಾಕು ಮೆಸ್ಕಾಂ'ನಲ್ಲಿ ಸಿಗತ್ತೆ JOB, ಕೂಡಲೇ ಅಪ್ಲೈ ಮಾಡಿ!

ನವೆಂಬರ್ 26, 2024 - 08:23
 0  12
ಸರ್ಕಾರಿ ಕೆಲಸ ಬೇಕಾ!? ಜಸ್ಟ್ 10 ಪಾಸಾಗಿದ್ರೆ ಸಾಕು ಮೆಸ್ಕಾಂ'ನಲ್ಲಿ ಸಿಗತ್ತೆ JOB, ಕೂಡಲೇ ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಹುದ್ದೆಗಳಿಗೆ 10ನೇ ಕ್ಲಾಸ್‌ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಕರ್ಷಕ ಸಂಬಳದ ಈ ಸರ್ಕಾರಿ ಉದ್ಯೋಗ'ಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 

ಮೆಸ್ಕಾಂ ಕಿರಿಯ ಪವರ್‌ಮ್ಯಾನ್ ಹುದ್ದೆಗೆ ವೇತನ ವಿವರ
ವೇತನ ಶ್ರೇಣಿ: ರೂ.28,550-63000.
ಮೊದಲು 3 ವರ್ಷ ತರಬೇತಿ ಅವಧಿಯಲ್ಲಿ ಈ ಕೆಳಗಿನ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಮೊದಲನೇ ವರ್ಷ : Rs.17,000.
ಎರಡನೇ ವರ್ಷ: Rs.19,000.
ಮೂರನೇ ವರ್ಷ: Rs.21,000.

ಮೆಸ್ಕಾಂ ಕಿರಿಯ ಪವರ್‌ಮ್ಯಾನ್ ಅರ್ಹತೆ ಹಾಗೂ ವಿದ್ಯಾರ್ಹತೆಗಳು
ಎಸ್‌ಎಸ್‌ಎಲ್‌ಸಿ / ಸಿಬಿಎಸ್‌ಇ / ಐಸಿಎಸ್‌ಇ ಮಂಡಳಿಯ 10ನೇ ತರಗತಿ ಪಾಸ್‌.
ಬಾಹ್ಯ / ಮುಕ್ತ ವಿವಿ /ಮುಕ್ತ ಶಾಲೆಯ 10ನೇ ತರಗತಿ ಉತ್ತೀರ್ಣತೆಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ಮೀರಿರಬಾರದು.
ಇತರೆ ಹಿಂದುಳಿದ ವರ್ಗದವರಿಗೆ 38 ವರ್ಷ ಮೀರಿರಬಾರದು.
ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
ಕನ್ನಡದಲ್ಲಿ ಓದುವ / ಬರೆಯುವ ಜ್ಞಾನ ಹೊಂದಿರತಕ್ಕದ್ದು.

ತೃಪ್ತಿಕರ ನೇತ್ರದೃಷ್ಟಿಯನ್ನು ಹೊಂದಿರತಕ್ಕದ್ದು.
ತೃಪ್ತಿಕರ ದೇಹದಾರ್ಡ್ಯತೆ ಹೊಂದಿರತಕ್ಕದ್ದು.

ಅರ್ಜಿ ಸಲ್ಲಿಸಲು ಮೆಸ್ಕಾಂ - ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ( ಮೆಸ್ಕಾಂ)ದ ಅಧಿಕೃತ ವೆಬ್‌ಸೈಟ್‌ ವಿಳಾಸ https://mescom.karnataka.gov.in
ಗೆ ಭೇಟಿ ನೀಡಬೇಕು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow