Job Vacancy: ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್: 500ಕ್ಕೂ ಹೆಚ್ಚು ಹುದ್ದೆ ಖಾಲಿ, ಬೇಗ ಅಪ್ಲೈ ಮಾಡಿ!

ನವೆಂಬರ್ 17, 2024 - 09:24
 0  18
Job Vacancy: ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್: 500ಕ್ಕೂ ಹೆಚ್ಚು ಹುದ್ದೆ ಖಾಲಿ, ಬೇಗ ಅಪ್ಲೈ ಮಾಡಿ!

ಸರ್ಕಾರಿ ಕೆಲಸ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 500ಕ್ಕೂ ಹೆಚ್ಚು ಹುದ್ದೆ ಖಾಲಿ ಇದೆ. ಹೀಗಾಗಿ ಆಸಕ್ತ ಅಭ್ಯರ್ಥಿಗಳು ಕೂಡಲೇ ಅಪ್ಲೈ ಮಾಡಿ. 

ಐಟಿಬಿಪಿಎಫ್​ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಇಲಾಖೆಯಲ್ಲಿ ಖಾಲಿ ಇರುವಂತ ಗ್ರೂಪ್- ಬಿ ಮತ್ತು ಸಿ ಹುದ್ದೆಗಳನ್ನು ತುಂಬಲಾಗುತ್ತಿದೆ. ಇವು ಟೆಲಿಕಮ್ಯುನಿಕೇಶನ್​ಗೆ ಸಂಬಂಧಿಸಿದ್ದು ನೂರಲ್ಲ, ಇನ್ನೂರಲ್ಲ ಐದು ನೂರಕ್ಕೂ ಅಧಿಕ ಹುದ್ದೆಗಳನ್ನ ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ಐಟಿಬಿಪಿಎಫ್ ಅಧಿಕೃತ ವೆಬ್​ಸೈಟ್​ ಮೂಲಕವೇ ಅರ್ಜಿ ಸಲ್ಲಿಸಬೇಕು. ನಾಳೆ ಅಂದರೆ ನವೆಂಬರ್ 15 ರಿಂದ ಈ ಉದ್ಯೋಗಗಳಿಗೆ ಸಂಬಂಧಿಸಿದ ಲಿಂಕ್​ ಅನ್ನು ಬಿಡುಗಡೆ ಮಾಡಲಾಗುತ್ತದೆ.

ಮಾಸಿಕ ಸಂಭಾವನೆ?

ಸಬ್​ಇನ್​ಸ್ಪೆಕ್ಟರ್- ₹35,400 ರಿಂದ ₹ 1,12,400
ಹೆಡ್​ ಕಾನ್​ಸ್ಟೆಬಲ್- ₹25,500 ರಿಂದ ₹ 81,100
ಕಾನ್​ಸ್ಟೆಬಲ್- ₹21,700 ರಿಂದ ₹ 69,100

ಹುದ್ದೆಗಳ ಹೆಸರು, ಎಷ್ಟು ಕೆಲಸಗಳು?

ಸಬ್​ಇನ್​ಸ್ಪೆಕ್ಟರ್- 78
ಸಬ್​ಇನ್​ಸ್ಪೆಕ್ಟರ್- 14
ಹೆಡ್​ ಕಾನ್​ಸ್ಟೆಬಲ್- 325
ಹೆಡ್​ ಕಾನ್​ಸ್ಟೆಬಲ್- 58
ಕಾನ್​ಸ್ಟೆಬಲ್- 44
ಕಾನ್​ಸ್ಟೆಬಲ್- 07
ಒಟ್ಟು ಹುದ್ದೆಗಳು- 526
ಅಭ್ಯರ್ಥಿಗಳಿಗೆ ವಯಸ್ಸು ಎಷ್ಟು ಆಗಿರಬೇಕು?

ಸಬ್​ಇನ್​ಸ್ಪೆಕ್ಟರ್- 20 ರಿಂದ 25 ವರ್ಷಗಳು
ಹೆಡ್​ ಕಾನ್​ಸ್ಟೆಬಲ್- 18 ರಿಂದ 25 ವರ್ಷಗಳು
ಕಾನ್​ಸ್ಟೆಬಲ್- 18 ರಿಂದ 23 ವರ್ಷಗಳು

ಈ ದಿನಾಂಕಗಳನ್ನು ನೆನಪಿಡಿ
ಆನ್​ಲೈನ್ ಅರ್ಜಿ ಸಲ್ಲಿಕೆ ಆರಂಭ- 15 ನವೆಂಬರ್ 2024
ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 14 ಡಿಸೆಂಬರ್ 2024

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow