'ಸೀತಾ ರಾಮ' ಧಾರಾವಾಹಿ ಮುಕ್ತಾಯ: ಸೀರಿಯಲ್ ಪೂರ್ಣಗೊಳ್ಳಲು ಅಸಲಿ ಕಾರಣ ಇಲ್ಲಿದೆ ನೋಡಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಸೀತಾ ರಾಮ' ಧಾರಾವಾಹಿ ಇದೀಗ ಮುಕ್ತಾಯ ಹಂತಕ್ಕೆ ಬಂದಿದೆ. ಹೌದು ಈಗಾಗಲೇ ಸೀತಾ ರಾಮ ಧಾರಾವಾಹಿಯ ಕೊನೆಯ ದಿನದ ಶೂಟ್ ಪೂರ್ಣಗೊಂಡಿದೆ. ಎರಡು ಮೂರು ವಾರಗಳಲ್ಲಿ ಧಾರಾವಾಹಿ ಕೊನೆಗೊಳ್ಳಲಿದೆ. ಮರಾಠಿ ಧಾರಾವಾಹಿ ‘ಮುಜಿ ತುಜಿ ರೇಶಿಮಗಾಡ’ ಧಾರಾವಾಹಿಯ ರಿಮೇಕ್ ಆಗಿ ಸೀತಾ ರಾಮ ಧಾರಾವಾಹಿ ಮೂಡಿ ಬಂತು.
2023ರ ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆರಂಭಿಸಿತು. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿಗೆ ಇನ್ನು ಕೆಲವೇ ದಿನಗಳಲ್ಲಿ ಕೊನೆಯ ಎಪಿಸೋಡ್ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಈ ವರೆಗೆ 465 ಎಪಿಸೋಡ್ಗಳನ್ನು ಪ್ರಸಾರ ಕಂಡಿದೆ.
‘ಸೀತಾ ರಾಮ’ ಧಾರಾವಾಹಿ ಈ ಮೊದಲು ಪ್ರೈಮ್ ಟೈಮ್ನಲ್ಲಿ ಪ್ರಸಾರ ಕಾಣುತ್ತಿತ್ತು. ಇತ್ತೀಚೆಗೆ ‘ನಾನಿನ್ನ ಬಿಡಲಾರೆ’ ಧಾರಾವಾಹಿ ಪ್ರಸಾರ ಆರಂಭ ಆಗುತ್ತಿದ್ದಂತೆ ‘ಸೀತಾ ರಾಮ’ ಸಮಯವನ್ನು ಸಂಜೆ 5.30ಕ್ಕೆ ಬದಲಾವಣೆ ಮಾಡಲಾಯಿತು. ಇದರಿಂದ ಜನಪ್ರಿಯತೆ ಕಡಿಮೆ ಆಯಿತು.
‘ಸೀತಾ ರಾಮ’ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದ್ದಾಗ ಇದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಇದ್ದರು. ಯಾವಾಗ ಧಾರಾವಾಹಿ ಸಂಜೆ ಪ್ರಸಾರ ಆರಂಭಿಸಿತೋ ಆಗ ದೊಡ್ಡ ಮಟ್ಟದಲ್ಲಿ ವೀಕ್ಷಕರನ್ನು ಈ ಧಾರಾವಾಹಿ ಕಳೆದುಕೊಂಡಿತು. ಇದರಿಂದ ಟಿಆರ್ಪಿ ಕುಸಿಯಿತು.
ಮೂಲ ಧಾರಾವಾಹಿಯ ಕಥೆಗೂ ಈ ಧಾರಾವಾಹಿಯ ಕಥೆಯಲ್ಲೂ ವ್ಯತ್ಯಾಸ ಮಾಡಿಕೊಳ್ಳಲಾಗಿದೆ ಎನ್ನುವ ಮಾತಿದೆ. ಇತ್ತೀಚೆಗೆ ಧಾರಾವಾಹಿಯ ಕಥೆ ದಿಕ್ಕು ತಪ್ಪಿದೆ ಎನ್ನುವ ಬಗ್ಗೆ ಚರ್ಚೆ ಆಗಿತ್ತು.
ನಿಮ್ಮ ಪ್ರತಿಕ್ರಿಯೆ ಏನು?






