ಸ್ಪರ್ಧಿಗಳ ಮುಖವಾಡ ಬಯಲು: ತ್ರಿವಿಕ್ರಮ್ ಗೆ ಮೋಕ್ಷಿತಾ ಸವಾಲ್, ಬದಲಾಯ್ತು ವಿಕ್ಕಿ ಗೇಮ್ ಪ್ಲ್ಯಾನ್!

ನವೆಂಬರ್ 4, 2024 - 20:10
 0  23
ಸ್ಪರ್ಧಿಗಳ ಮುಖವಾಡ ಬಯಲು: ತ್ರಿವಿಕ್ರಮ್ ಗೆ ಮೋಕ್ಷಿತಾ ಸವಾಲ್, ಬದಲಾಯ್ತು ವಿಕ್ಕಿ ಗೇಮ್ ಪ್ಲ್ಯಾನ್!

ಬಿಗ್ ಬಾಸ್ ಸೀಸನ್ 11 ಸಾಕಷ್ಟು ಇಂಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದ್ದು, ಈ ವಾರ ಜೊತೆಯಲ್ಲಿದ್ದು, ಬೆನ್ನ ಹಿಂದೆ ಮಾತನಾಡಿದವರ ವಿಡಿಯೋ ತೋರಿಸಲಾಗಿದೆ. ಇದು ಸ್ಪರ್ಧಿಗಳ ಕಿತ್ತಾಟಕ್ಕೆ ಕಾರಣವಾಗಿದೆ. 

ಬಿಗ್‌ ಬಾಸ್‌ ಮನೆಯಲ್ಲಿ ಯಾರನ್ನ ಯಾರು ನಂಬಲೇ ಬಾರದು. ಈ ಮಾತಿಗೆ ಸಾಕ್ಷಿಯಾಗಿ ಬೆನ್ನ ಹಿಂದೆ ಮಾತಾಡಿದ್ದ ವಿಡಿಯೋ ಕ್ಲಿಪ್‌ಗಳನ್ನ ಮನೆಯವ್ರ ಮುಂದೆ ಪ್ಲೇ ಮಾಡಲಾಗಿದೆ. ಈ ವಿಡಿಯೋ ನೋಡಿದ ಬಿಗ್ ಬಾಸ್ ಮಂದಿ ಶಾಕ್ ಆಗಿದ್ದು, ಗೋಮುಖ ವ್ಯಾಘ್ರ ಯಾರು ಅನ್ನೋ ಆಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ

ಮೊದಲಿಗೆ ಶಿಶಿರ್ ಅವರ ಬಳಿ ಐಶ್ವರ್ಯಾ ಅವರು ಭವ್ಯ ಬಗ್ಗೆ ಮಾತಾಡಿದ್ದಾರೆ. ಕಣ್ಣಿಗೆ ಕಾಣಿಸುತ್ತಾ ಇದೆ ಅವರ ಹೊಟ್ಟೆ ಕಿಚ್ಚು ಎಂದು ಐಶ್ವರ್ಯಾ ಹೇಳಿದ್ದು, ಬೆನ್ನ ಹಿಂದೆ ಮಾತನಾಡಿದ ಈ ವಿಡಿಯೋ ಮನೆಯಲ್ಲಿ ಹಲ್ ಚಲ್ ಎಬ್ಬಿಸಿದೆ. ಮನೆ ಮಂದಿಯ ಈ ಮುಖವಾಡ ನೋಡಿ ಹನುಮಂತ ಫುಲ್ ಖುಷ್ ಆಗಿದ್ದಾನೆ.

ಇನ್ನು, ಬೆನ್ನ ಹಿಂದೆ ಮಾತನಾಡಿರುವ ಗುಟ್ಟಿನ ಈ ವಿಡಿಯೋದಲ್ಲಿ ತ್ರಿವಿಕ್ರಮ್‌ ಕೂಡ ಮೋಕ್ಷಿತಾ ಅವರ ಬಳಿ ಸಿಕ್ಕಿಬಿದ್ದಿದ್ದಾರೆ. ಭವ್ಯ, ಮಾನಸಾ ಅವರ ಬಳಿ ತ್ರಿವಿಕ್ರಮ್‌ ಅವರು ಉಗ್ರಂ ಮಂಜು ಅವರ ಟೀಮ್‌ನಲ್ಲಿ ಒಂದಕ್ಕಿ ಹೊಡೆದ್ರೆ 2 ಅಕ್ಕಿ ಫ್ರೀ. ಇನ್ನೊಂದು ಹಕ್ಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಗೇಲಿ ಮಾಡಿದ್ದಾರೆ.

ಮೋಕ್ಷಿತಾ, ಗೌತಮಿ ಅವರನ್ನು ಹಕ್ಕಿ ಅಂದಿರೋ ತ್ರಿವಿಕ್ರಮ್‌ ಮಾತು ಬಿಗ್ ಬಾಸ್‌ ಮನೆಯಲ್ಲಿ ಹೊಸ ಕಿಚ್ಚು ಹಚ್ಚಿದೆ. ತ್ರಿವಿಕ್ರಮ್ ಮಾತು ಮೋಕ್ಷಿತಾ ಅವರ ಮನಸ್ಸಿಗೆ ಚುಚ್ಚಿದ್ದು ಉಗ್ರವಾತಾರ ತಾಳಿದ್ದಾರೆ. ಅಕ್ಕ-ತಂಗಿ ಜೊತೆ ಮಾತನಾಡಿದವರು ಹಕ್ಕಿ ಅಂತ ಮಾತಾಡುತ್ತಾರಾ. ಅವರ ತನ ಏನು ಅನ್ನೋದನ್ನ ತೋರಿಸುತ್ತೆ. ಅತಿ ವಿನಯಮ್ ದೂರ್ತ ಲಕ್ಷಣಂ ಅಂತಾರಲ್ಲ ಅದು ಇದೇನೆ. ಗೋಮುಖ ವ್ಯಾಘ್ರ ಅಂತ ಕೊಟ್ಟೆ ಅದಕ್ಕೆ ನಾನು ಖಂಡಿತ ಪಶ್ಚಾತ್ತಾಪ ಪಡುವುದಿಲ್ಲ ಎಂದು ಮೋಕ್ಷಿತಾ ಸವಾಲು ಹಾಕಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow