ಸ್ಪೋರ್ಟ್ಸ್ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಆಯ್ಕೆಯಾದವರಿಗೆ ಸಿಗುವ ಸಂಬಳ ಎಷ್ಟು!?

ಕೆಲಸ ಇಲ್ಲದೆ ಖಾಲಿ ಇರುವ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಸ್ಪೋರ್ಟ್ಸ್ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೆಲಸಗಳಿಗೆ ನಿಮ್ಮ ಹೆಸರು ಅಂತಿಮವಾದರೆ, ಸಂಬಳ 1 ಲಕ್ಷ ರೂಪಾಯಿಗಿಂತ ಅಧಿಕವಿರುತ್ತದೆ.
ಎಸ್ಎಐ ಇಲ್ಲಿ ಖಾಲಿ ಇರುವಂತ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತಿದೆ. ಹೆಚ್ಚಿನ ಕಾರ್ಯಕ್ಷಮತೆಯ ನಿರ್ದೇಶಕ ಹಾಗೂ ಕಂಡೀಷನಿಂಗ್ ಎಕ್ಸ್ಪರ್ಟ್ ಹುದ್ದೆಗಳನ್ನು ಆಹ್ವಾನ ಮಾಡಲಾಗಿದೆ.
ಈ ಸಂಬಂಧ ಅರ್ಹ ಹಾಗೂ ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳ ಹೆಸರನ್ನು ಮೊದಲು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಬಳಿಕ ಅಧಿಕೃತವಾಗಿ ನೋಟಿಫಿಕೆಶನ್ ಮೂಲಕ ಆಯ್ಕೆ ಆದ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಸಂದರ್ಶನದಲ್ಲಿ ನೀಡುವ ಪರ್ಫಾಮೆನ್ಸ್ ಆಧಾರದ ಮೇಲೆ ಈ ಹುದ್ದೆ ನೀಡಲಾಗುತ್ತದೆ. ಈ ಕೆಲಸಗಳು ಒಟ್ಟು ಎರಡು ಇದ್ದು ಉದ್ಯೋಗಕ್ಕೆ ಆಯ್ಕೆ ಆದವರನ್ನು ಬೆಂಗಳೂರು, ದೆಹಲಿ ಹಾಗೂ ಕೋಲ್ಕತ್ತದಲ್ಲಿ ನೇಮಕ ಮಾಡಲಾಗುತ್ತದೆ.
ಉದ್ಯೋಗಾಂಕ್ಷಿಗಳಿಗೆ ಕನಿಷ್ಠ 45 ರಿಂದ ಗರಿಷ್ಠ 65 ವರ್ಷಗಳ ಒಳಗೆ ಇರಬೇಕು. ಎಂಎಸ್ಐ, ಪಿಹೆಚ್ಡಿ ಹಾಗೂ ಎಂಬಿಎ ಮಾಡಿ 10 ವರ್ಷಗಳ ಅನುಭವವನ್ನು ಹೊಂದಿರಬೇಕು. ಸಂದರ್ಶನದಲ್ಲಿ ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗೆ ತಿಂಗಳಿಗೆ 80,000 ದಿಂದ 15,0000 ರೂಪಾಯಿ ಸಂಬಳ ನೀಡಲಾಗುತ್ತದೆ.
ಉದ್ಯೋಗಾರ್ಥಿಗಳು ಈ ಕೆಲಸಗಳಿಗೆ ಸಂಬಂಧಿಸಿದ ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






