ಸ್ಯಾಂಡಲ್ ವುಡ್ ಗೆ ಜೂನಿಯರ್ ರಮ್ಯಾ ಎಂಟ್ರಿ!? ಹೋಲಿಕೆ ಬಗ್ಗೆ ದುನಿಯಾ ವಿಜಯ್ ಪುತ್ರಿ ಹೇಳಿದ್ದೇನು?

ಸ್ಯಾಂಡಲ್ ವುಡ್ ಗೆ ದುನಿಯಾ ವಿಜಯ್ ಪುತ್ರಿ ಎಂಟ್ರಿ ಕೊಟ್ಟಿದ್ದು, ಇವರ ಮುಖದ ಹೋಲಿಕೆಯನ್ನು ಕೆಲವರು ಬ್ಯೂಟಿ ಕ್ವೀನ್ ರಮ್ಯಾಗೆ ಹೋಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಜಯ್ ಪುತ್ರಿ, ನಿಜ ಹೇಳಬೇಕು ಅಂದರೆ ಅದು ತುಂಬಾ ದೊಡ್ಡ ಮಾತು. ರಮ್ಯಾ ಮೇಡಂ ಅವರು ಸೂಪರ್ ಸ್ಟಾರ್. ಅವರು ತುಂಬಾ ಚೆನ್ನಾಗಿದ್ದಾರೆ. ನಾನು ಚಿಕ್ಕ ವಯಸ್ಸಿನಿಂದಲೂ ಅವರ ಫ್ಯಾನ್. ಅವರು ನಮ್ಮ ತಂದೆ ಜೊತೆ ಜಾನಿ ಮೇರಾ ನಾಮ್ ಸಿನಿಮಾ ಮಾಡಿದ್ದರು. ಆಗ ನಾನು ಅವರ ಜೊತೆಯೇ ಇರುತ್ತಿದ್ದೆ. ಆಗ ನಮ್ಮ ಅಪ್ಪ ಹೇಳೋರು, ರಮ್ಯಾ ಅವಳನ್ನ ನಿಮ್ಮ ಕ್ಯಾರವಾನ್ಗೆ ಕರೆದುಕೊಂಡು ಹೋಗು ಎಂದು ಹೇಳೋರು. ಅಷ್ಟು ದೊಡ್ಡ ಫ್ಯಾನ್ ನಾನು. ನನಗೆ ಅವರನ್ನು ಕಂಪೇರ್ ಮಾಡಿ ಹೇಳ್ತಾರೆ ಅಂದ್ರೆ ಇದು ದೊಡ್ಡ ಕಾಂಪ್ಲಿಮೆಂಟ್ ಎಂದಿದ್ದಾರೆ.
ಇನ್ನೂ ದುನಿಯಾ ವಿಜಯ್ ಅವರ ಕಿರಿಯ ಮಗಳು ಮೋನಿಷಾ ವಿಜಯ್ ಚಂದನವನಕ್ಕೆ ಕಾಲಿಟ್ಟಿದ್ದಾರೆ. ವಿನಯ್ ರಾಜ್ಕುಮಾರ್ ಹೀರೋ ಆಗಿ ನಟಿಸುತ್ತಿರುವ ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ. ಸಿಟಿ ಲೈಟ್ಸ್ ಸಿನಿಮಾವನ್ನು ಸ್ವತಃ ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಅಂತೆಯೇ ನಿನ್ನೆ ಬೆಂಗಳೂರಿನ ಬಂಡೆ ಮಹಕಾಳಿ ಸನ್ನಿಧಿಯಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿತು.
ನಿಮ್ಮ ಪ್ರತಿಕ್ರಿಯೆ ಏನು?






