"ಹಣೆಬರಹದಲ್ಲಿ ಇದ್ದಂಗೆ ಆಗುತ್ತೆ, ಜೈಲಿಗೆ ಬರಬೇಡ: ಪತ್ನಿ ವಿಜಯಲಕ್ಷ್ಮಿಗೆ ಹೇಳಿದ ನಟ ದರ್ಶನ್
ರೇಣುಕಾಸ್ವಾಮಿ ಕೊಲೆ ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂ ತೀರ್ಪು ಕೊಟ್ಟ ನಂತರ ದರ್ಶನ್ ಮತ್ತೆ ಜೈಲು ಸೇರುವಂತಾಯಿತು. ಇನ್ನೂ ನಿನ್ನೆ ನಟ ದರ್ಶನ್‌ನ್ನು ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿ ಬಂದು,ಪತಿಯ ಕಷ್ಟಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಈ ವೇಳೆ ದೇಹಕ್ಕೆ ಯಾವುದೇ ಆಕ್ಟಿವಿಟಿ ಇಲ್ಲದೆ ತುಂಬಾ ಕಷ್ಟವಾಗುತ್ತಿದೆ ಎಂದು ದರ್ಶನ್ ಪತ್ನಿಗೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಬರಲು ಕಷ್ಟ ಎದುರಿಸುವಂತಾಗಿದೆ. ಜೈಲಿಗೆ ಬಂದು ಗಂಟೆಗಟ್ಟಲೇ ಕಾದು ಬಳಿಕ ದರ್ಶನ್ ಭೇಟಿಯಾಗಬೇಕು. ವಿಜಯಲಕ್ಷ್ಮಿಯ ಕಣ್ಣೀರು ನೋಡಿ ದರ್ಶನ್, “ನೀನು ಜೈಲಿಗೆ ಬರಬೇಡ. ನನ್ನ ಹಣೆಬರಹ ಇರುವ ಹಾಗೆ ಆಗುತ್ತೆ ಎಂದಿದ್ದಾರಂತೆ
ಜೊತೆಗೆ ಜೈಲಲ್ಲಿ ದರ್ಶನ್ ಕೂಡ ಕಷ್ಟ ಅನುಭವಿಸುತ್ತಿದ್ದು, ಇದನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಇನ್ನೂ ಪ್ರಕರಣದ ಸಹ ಆರೋಪಿಗಳು ಕೂಡ ದರ್ಶನ್ ವಿರುದ್ಧ ಮುನಿಸಿಕೊಂಡಿದ್ದಾರೆ. ದರ್ಶನ್ ಮಾತು, ಸ್ನೇಹ ಅಷ್ಟಕಷ್ಟೇ ಎನ್ನುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?