ಹಳೆ ಬಟ್ಟೆ ಎಸೆಯೋದು ಅಥವಾ ದಾನ ಮಾಡುವುದು.. ಇದರಲ್ಲಿ ಯಾವುದು ಒಳ್ಳೆಯದು ಗೊತ್ತಾ?

ನಾವು ಧರಿಸುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದರೆ ನೀವು ನಂಬುತ್ತೀರಾ.? ಹೌದು, ಕೆಲವೊಮ್ಮೆ ನಾವು ಧರಿಸುವ ಬಟ್ಟೆಗಳು ಕೂಡ ನಮ್ಮ ಜೀವನದ ಮೇಲೆ ಋಣಾತ್ಮಕ ಹಾಗೂ ಧನಾತ್ಮಕ ಪ್ರಭಾವ ಬೀರುತ್ತದೆ. ನಮ್ಮ ಶಾಸ್ತ್ರದಲ್ಲೂ ಇದರ ಬಗ್ಗೆ ಉಲ್ಲೇಖಗಳಿವೆ. ನಾವು ಮನೆಯಿಂದ ಹೊರಗಡೆ ಹೋಗುವಾಗ ಬಳಸುವ ಬಟ್ಟೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.
ಇನ್ನೂ ಹೊಸ ಬಟ್ಟೆಗಳನ್ನು ದೀರ್ಘಕಾಲದವರೆಗೆ ಧರಿಸಿದ ನಂತರ ಅವು ಹಳೆಯದಾಗುತ್ತದೆ. ಇನ್ನೂ ಚಿಕ್ಕ ಮಕ್ಕಳಿಗೆ ಖರೀದಿಸಿದ ಬಟ್ಟೆಗಳು ಅವರು ದೊಡ್ಡವರಾಗುತ್ತಿದ್ದಂತೆ ಚಿಕ್ಕದಾಗುತ್ತಾ ಹೋಗುತ್ತದೆ. ನಂತರ ಇಂತಹ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಕೆಲವರು ಹಳೆ ಬಟ್ಟೆಗಳನ್ನು ಬೀದಿಯಲ್ಲಿ ಅಥವಾ ಕಸದಲ್ಲಿ ಎಸೆಯುತ್ತಾರೆ. ಕೆಲವರು ತಮ್ಮ ಹಳೆಯ ಬಟ್ಟೆಗಳನ್ನು ಬೇರೆಯವರಿಗೆ ಕೊಡುತ್ತಾರೆ. ಇನ್ನೂ ಕೆಲವರು ಮನೆಯನ್ನು ಸ್ವಚ್ಛಗೊಳಿಸಲು ಹಳೆಯ ಬಟ್ಟೆಗಳನ್ನು ಸಹ ಬಳಸುತ್ತಾರೆ. ಇನ್ನೂ ಕೆಲವೆಡೆ ಹಳೆ ಸೀರೆ ಅಥವಾ ಬಟ್ಟೆ ಇರುವ ಪಾತ್ರೆ, ಬಕೆಟ್ ಖರೀದಿಸುವ ಟ್ರೆಂಡ್ ಇದೆ. ಆದರೆ ಹಳೆಯ ಬಟ್ಟೆಗಳನ್ನು ಬಿಸಾಡುವ ಈ ಅಭ್ಯಾಸ ಒಳ್ಳೆಯದೇ? ವಾಸ್ತು ಶಾಸ್ತ್ರ ಏನು ಹೇಳುತ್ತದೆ?
ವಾಸ್ತು ಶಾಸ್ತ್ರದ ಪ್ರಕಾರ, ನೀವು ನಿಮ್ಮ ಬಟ್ಟೆಗಳನ್ನು ಎಸೆಯುವ, ಮಾರಾಟ ಮಾಡುವ ಅಥವಾ ಬೇರೆಯವರಿಗೆ ಕೊಡುವ ಅಭ್ಯಾಸ ಬಿಟ್ಟುಬಿಡಬೇಕು. ಆದರೂ ಕೂಡ ನಿಮಗೆ ಹಳೆ ಬಟ್ಟೆಗಳನ್ನು ಮನೆಯಲ್ಲಿ ಇಡಲು ಜಾಗವಿಲ್ಲ ಅಥವಾ ತೊಂದರೆಯಾಗುತ್ತಿದ್ದರೆ, ಅದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ.
ಇನ್ನೂ ಕೆಲವರಿಗೆ ಹಳೆಯ ಬಟ್ಟೆಗಳನ್ನು ಮನೆಯನ್ನು ಸ್ವಚ್ಛಗೊಳಿಸಲು ಬಳಸುವ ಅಭ್ಯಾಸವಿದೆ. ಅಡುಗೆ ಕೋಣೆಯಲ್ಲಿ ಅಥವಾ ನೆಲ ಒರೆಸಲು ಕೆಲವರು ಹಳೆಯ ಬಟ್ಟೆಯನ್ನು ಬಳಸುತ್ತಾರೆ. ಆದರೆ ಇಂತಹ ಅಭ್ಯಾಸ ಮನೆಗೆ ಒಳ್ಳೆಯದಲ್ಲ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






