ಹೆಂಡ್ತಿ, ಇಬ್ಬರು ಮಕ್ಕಳನ್ನು ಕೊಂದು ಸೂಸೈಡ್ ಮಾಡಿಕೊಂಡ ಪತಿ: ಸಾವಿಗೆ ಕಾರಣ?

ಎಪ್ರಿಲ್ 3, 2025 - 14:00
 0  11
ಹೆಂಡ್ತಿ, ಇಬ್ಬರು ಮಕ್ಕಳನ್ನು ಕೊಂದು ಸೂಸೈಡ್ ಮಾಡಿಕೊಂಡ ಪತಿ: ಸಾವಿಗೆ ಕಾರಣ?

ಕಲಬುರಗಿ:- ನಗರದ ಗಾಬರೆ ಲೇಔಟ್ ಅಪಾರ್ಟ್ಮೆಂಟ್‌ವೊಂದರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹತ್ಯೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಆಚಾತುರ್ಯ ನಡೆದಿದೆ. 

ಮೂರು ತಿಂಗಳ ಹಸುಗೂಸು ಸೇರಿ ಸಂತೋಷ್ ಕೊರಳ್ಳಿ (45), ಶೃತಿ (35) ಮೃತರು. ಪತ್ನಿ ಹಾಗೂ ಮಕ್ಕಳನ್ನು ಮೊದಲು ಕೊಲೆ ಮಾಡಿ, ನಂತರ ಸಂತೋಷ್ ಮನೆಯಲ್ಲಿದ್ದ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಗಂಡ-ಹೆಂಡತಿ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದ್ದು, ಇದರಿಂದ ಬೇಸತ್ತ ಸಂತೋಷ್ ಕೊರಳ್ಳಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow