ಹೆಚ್ಚಿನ ವರದಕ್ಷಿಣೆ ತರದಿದ್ದಕ್ಕೆ ಸೊಸೆಗೆ HIV ಸೋಂಕಿತ ಸೂಜಿ ಚುಚ್ಚಿದ ಅತ್ತೆ-ಮಾವ!

ಫೆಬ್ರವರಿ 18, 2025 - 22:05
 0  10
ಹೆಚ್ಚಿನ ವರದಕ್ಷಿಣೆ ತರದಿದ್ದಕ್ಕೆ ಸೊಸೆಗೆ HIV ಸೋಂಕಿತ ಸೂಜಿ ಚುಚ್ಚಿದ ಅತ್ತೆ-ಮಾವ!

ವರದಕ್ಷಿಣೆ ಎಂಬ ಪಿಡುಗು ಇಂದಿಗೂ ನಮ್ಮ ಸಮಾಜದಲ್ಲಿ ಜಾರಿಯಲ್ಲಿರುವುದು ದುರುದೃಷ್ಟಕರ ಸಂಗತಿಯಾಗಿದೆ. ಇದೀಗ ವರದಕ್ಷಿಣೆಯಾಗಿ 10 ಲಕ್ಷ ರೂ. ಹಾಗೂ ಎಸ್​ಯುವಿ ಕಾರು ಕೊಟ್ಟಿಲ್ಲವೆಂದು ಅತ್ತೆ-ಮಾವ ಸೊಸೆಗೆ ಎಚ್​ಐವಿ ಸೋಂಕಿತ ಸೂಜಿ ಚುಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.

30 ವರ್ಷದ ಮಹಿಳೆಗೆ ಸಂಬಂಧಿಸಿದ ಈ ಘಟನೆಯಲ್ಲಿ ದೂರು ದಾಖಲಿಸುವಂತೆ ಸಹರಾನ್​ಪುರ ನ್ಯಾಯಾಲಯವು ಉತ್ತರ ಪ್ರದೇಶದ ಪೊಲೀಸರಿಗೆ ಆದೇಶಿಸಿದೆ. ಮಹಿಳೆ ಸಹರಾನ್​ಪುರ ನಿವಾಸಿ, ಆಕೆಯ ಪತಿ, ಅತ್ತೆ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಐಪಿಸಿ 307, 498ಎ, 323, 328, 406 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಪ್ರಕಾರ, ಈ ಘಟನೆ ಮೇ 2024 ರಲ್ಲಿ ಹರಿದ್ವಾರದಲ್ಲಿರುವ ಮಹಿಳೆಯ ಅತ್ತೆಯ ಮನೆಯಲ್ಲಿ ನಡೆದಿತ್ತು.

ಮದುವೆಯಾದ ತಕ್ಷಣ ಆಕೆಗೆ ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದ್ದರು, ಮಗಳನ್ನು ಅವಮಾನಿಸಿದರು, ಮಗನಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿದರು. ಮಾರ್ಚ್​ 25, 2023ರಂದು ಆಕೆಯನ್ನು ಮನೆಯಿಂದ ಹೊರಹಾಕಲಾಯಿತು. ಮೂರು ತಿಂಗಳುಗಳ ಕಾಲ ನಮ್ಮೊಂದಿಗೆ ಇದ್ದಳು, ನಂತರ ಹೇಗೋ ಮಾತನಾಡಿ ಆಕೆಯ ಗಂಡನ ಮನೆಗೆ ಕಳುಹಿಸಲಾಯಿತು. ಬಳಿಕ ಆಕೆಗೆ ದೈಹಿಕ ಹಾಗೂ ಮಾನಸಿಕವಾಗಿ ಚಿತ್ರಹಿಂಸೆ ನೀಡಲಾಯಿತು.

2024ರ ಮೇನಲ್ಲಿ ಆಕೆಯ ಅತ್ತೆ ಮಾವ ಬಲವಂತವಾಗಿ ಆಕೆಗೆ ಎಚ್​ಐವಿ ಸೋಂಕಿತ ಸಿರಿಂಜ್ ಅನ್ನು ಚುಚ್ಚಿದ್ದರು. ಆಕೆಯ ಆರೋಗ್ಯ ಶೀಘ್ರವಾಗಿ ಹದಗೆಟ್ಟಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ಆಕೆ ಎಚ್​ಐವಿ ಪಾಸಿಟಿವ್ ಆಗಿರುವುದು ತಿಳಿದುಬಂದಿತ್ತು. ಆದರೆ ಆಕೆಯ ಪತಿಗೆ ಎಚ್‌ಐವಿ-ನೆಗೆಟಿವ್ ಕಂಡುಬಂದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow