ಹೆಣ್ಣಿನ ಹಿಂದೆ ಹೋಗುವ ಜೊಲ್ಲಾ ಅವನು! ಚೈತ್ರಾ ಮಾತಿಗೆ ಬಿಗ್ ಮನೆಯಿಂದ ಹೋಗಲು ಶಿಶಿರ್ ನಿರ್ಧಾರ!

ಡಿಸೆಂಬರ್ 5, 2024 - 20:14
 0  15
ಹೆಣ್ಣಿನ ಹಿಂದೆ ಹೋಗುವ ಜೊಲ್ಲಾ ಅವನು! ಚೈತ್ರಾ ಮಾತಿಗೆ ಬಿಗ್ ಮನೆಯಿಂದ ಹೋಗಲು ಶಿಶಿರ್  ನಿರ್ಧಾರ!

ಬಿಗ್ ಬಾಸ್ ಸೀಸನ್ 11 ಸಾಕಷ್ಟು ಕುತೂಹಲಕಾರಿ ಮೂಡಿ ಬರುತ್ತಿದ್ದು, ವೀಕ್ಷಕರ ಮನರಂಜಿಸುತ್ತಿದೆ. ಅದರಂತೆ ಈ ವಾರ 2 ಟಿವಿ ಚಾನೆಲ್ ಗಳಾಗಿ ವಿಂಗಡಿಸಿರುವ ಬಿಗ್ ವೀಕ್ಷಕರನ್ನು ಮನರಂಜಿಸುವಂತೆ ಸೂಚಿಸಿದೆ. 

ಅದರಂತೆ  ಈ ವಾರ ಎಲ್ಲಾ ಸ್ಪರ್ಧಿಗಳು ಸಖತ್ತಾಗಿ ಆಟ ಆಡುತ್ತಿದ್ದಾರೆ. ಅಲ್ಲದೇ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದ್ದು, ಸ್ಪರ್ಧಿಗಳ ಮಧ್ಯೆ ಜೋರು ಗಲಾಟೆಯೇ ನಡೆದಿದೆ. 

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಈ ವಾರ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಶಿಶಿರ್‌ ಶಾಸ್ತ್ರಿ ಮತ್ತು ಚೈತ್ರಾ ಕುಂದಾಪುರ ನಡುವೆ ಬಿಗ್‌ ಫೈಟ್‌ ನಡೆದಿದೆ. 

ಇದಕ್ಕೂ ಮುನ್ನ ಚೈತ್ರಾ ಅವರು ತ್ರಿವಿಕ್ರಮ್‌ ಅವರನ್ನು ನಾಮಿನೇಟ್‌ ಮಾಡುವಾಗ ಮೋಕ್ಷಿತಾ ಅವರನ್ನು ಸೈಕೋ ಅಂತೀರಾ ಎಂದಿದ್ದಾರೆ. 

ಆಗ ತ್ರಿವಿಕ್ರಮ್‌ ನೀವೂ ಸಹ ನನ್ನ ಶಿಶಿರ್‌ ಅವರನ್ನು ಹೆಣ್ಣು ಮಕ್ಕಳ ಹಿಂದೆ ತಿರುಗುತ್ತಿರುವ ಜೊಲ್ಲ ಎಂದು ಹೇಳಿದ್ದಾರೆ ಎನ್ನುತ್ತಾರೆ. ಇದರಿಂದ ಕೋಪಗೊಂಡ ಶಿಶಿರ್‌, ನನಗೆ ಈ ಬಗ್ಗೆ ಕ್ಲಾರಿಟಿ ಸಿಗಬೇಕು. ಅಲ್ಲಿಯವರೆಗೂ ಇಲ್ಲಿಂದ ಕದಲುವುದಿಲ್ಲ. ಮರ್ಯಾದೆ ಕಳೆದುಕೊಳ್ಳಲು ಇಲ್ಲಿಗೆ ಬಂದಿಲ್ಲ ಎನ್ನುತ್ತಾರೆ. 

ನಾನು ಇನ್ನೂ ಈ ಮನೆಯಲ್ಲಿ ಇರುವುದಿಲ್ಲ. ನನಗೆ ಹೊರಗೆ ಕಳಿಸಿ ಎಂದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow