10 ವರ್ಷದ ಬಾಲಕಿ ಶವ ಪತ್ತೆ! ಅತ್ಯಾಚಾರ ಶಂಕೆ - ಆರೋಪಿ ಗುರುತು ಪತ್ತೆ

ಅಕ್ಟೋಬರ್ 9, 2025 - 18:25
 0  55
10 ವರ್ಷದ ಬಾಲಕಿ ಶವ ಪತ್ತೆ! ಅತ್ಯಾಚಾರ ಶಂಕೆ - ಆರೋಪಿ ಗುರುತು ಪತ್ತೆ

ಮೈಸೂರು: ಮೈಸೂರಿನ ವಸ್ತುಪ್ರದರ್ಶನದ ಬಳಿ ಅಂದಾಜು 10-13 ವರ್ಷದ ಅಪರಿಚಿತ ಬಾಲಕಿಯ ಶವ ಪತ್ತೆಯಾಗಿದೆ. ಮೃತ ಬಾಲಕಿ ಮೈಸೂರು ದಸರಾಗೆ ಗೊಂಬೆ, ಬಲೂನ್ ಮಾರಲು ಬಂದವಳಾಗಿರಬಹುದು ಎಂದು ಅಂದಾಜಿಸಲಾಗಿದ್ದು, ನಜರಬಾದ್ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ಸ್ಥಳದಲ್ಲಿ ಮೊನ್ನೆ ವೆಂಕಟೇಶ್ ಎಂಬುವರ ಹತ್ಯೆಯಾಗಿತ್ತು.

ಹೌದು ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಕಲಬುರಗಿ ಕಡೆಯಿಂದ ಮೈಸೂರಿಗೆ ಹಕ್ಕಿಪಿಕ್ಕಿ ಜನಾಂಗದ 50ಕ್ಕೂ ಹೆಚ್ಚು ಕುಟುಂಬಗಳು ಬಂದಿವೆ. ಬುಧವಾರ ತಡರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಅಪ್ರಾಪ್ತೆಯ ಹತ್ಯೆಯಾಗಿದೆ. ಕೇವಲ ಎರಡೇ ದಿನಗಳ ಅಂತರದಲ್ಲಿ ಒಂದೇ ಜಾಗದಲ್ಲಿ ಎರಡು ಮರ್ಡರ್ ಆದಂತಾಗಿದೆ.

ಎರಡು ದಿನಗಳ ಹಿಂದೆ ಇದೇ ಜಾಗದಲ್ಲಿ ರೌಡಿ ಶೀಟರ್‌ನ ಸಹರ್ವತಿಯ ಬರ್ಬರ ಹತ್ಯೆ ಆಗಿತ್ತು. ಅದೇ ಜಾಗದಲ್ಲಿ ನೆನ್ನೆ ರಾತ್ರಿ ಅಪ್ರಾಪ್ತ ಬಾಲಕಿ ಮರ್ಡರ್ ಆಗಿದೆ. ಸದ್ಯ ವಿಚಾರಣೆಗಾಗಿ ವ್ಯಾಪಾರಕ್ಕೆ ಆಗಮಿಸಿದ್ದ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನ ಪೊಲೀಸರು ಕರೆದೊಯ್ದಿದ್ದಾರೆ. ನಜರಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಘಟನೆ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ನಜರಬಾದ್‌ ಠಾಣಾ ಪೊಲೀಸರು ಆರೋಪಿಯ ಗುರುತು ಪತ್ತೆಹಚ್ಚಿದ್ದಾರೆ. ರೆಡ್‌ ಶರ್ಟ್‌, ಜೀನ್ಸ್‌ ಪ್ಯಾಂಡ್‌ ಧರಸಿದ್ದ ಕೊಲೆ ಆರೋಪಿಯ ಫೋಟೋ ಸಿಸಿಟಿವಿಯಲ್ಲಿ ಲಭ್ಯವಾಗಿದೆ. ಕೃತ್ಯ ಎಸಗುವ ವೇಳೆ ಆರೋಪಿ ಕಾಲಿಗೆ ಚಪ್ಪಲಿ ಕೂಡ ಧರಿಸಿರಲಿಲ್ಲ ಎಂಬುದೂ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಗೊತ್ತಾಗಿದೆ.

ಫೋಟೋ ಲಭ್ಯವಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯ ಹಿನ್ನೆಲೆಯನ್ನು ಪತ್ತೆಹಚ್ಚಿದ್ದಾರೆ. ಆರೋಪಿಯನ್ನ ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ (31) ಎಂದು ಗುರುತಿಸಲಾಗಿದೆ. 2 ವರ್ಷ ಜೈಲು ವಾಸ ಅನುಭವಿಸಿದ್ದ ಕಾರ್ತಿಕ್‌ 4 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಊರು ಸೇರದೇ ಎಲ್ಲೆಂದರಲ್ಲಿ ಕುಡಿದು ಅಲೆಯುತ್ತಿದ್ದ ಎಂದು ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow