13 ವರ್ಷದ ಪ್ರೀತಿ... ಅರ್ಜುನ್ ಸರ್ಜಾ 2ನೇ ಪುತ್ರಿಗೆ ಕೂಡಿಬಂತು ಕಂಕಣಭಾಗ್ಯ!

ಎಪ್ರಿಲ್ 18, 2025 - 18:27
 0  17
13 ವರ್ಷದ ಪ್ರೀತಿ... ಅರ್ಜುನ್ ಸರ್ಜಾ 2ನೇ ಪುತ್ರಿಗೆ ಕೂಡಿಬಂತು ಕಂಕಣಭಾಗ್ಯ!

ಇತ್ತೀಚೆಗಷ್ಟೇ ಮೊದಲ ಮಗಳ ಮದುವೆ ಮಾಡಿದ್ದ ಅರ್ಜುನ್ ಸರ್ಜಾ ಇದೀಗ ಎರಡನೇ ಮಗಳ ಮದುವೆ ತಯಾರಿಯಲ್ಲಿ ಬ್ಯೂಸಿ ಆಗಿದ್ದಾರೆ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಸಂಭ್ರಮ ಮನೆ ಮಾಡಿದ್ದು, ಎರಡನೇ ಮಗಳು ಅಂಜನಾ ಇದೀಗ ತಾನು ಪ್ರೀತಿಸಿದ ಹುಡುಗನಿಗೆ ಓಕೆ ಹೇಳಿದ್ದಾರೆ. ಅದಕ್ಕೇನೆ ಇಡೀ ಫ್ಯಾಮಿಲಿ ಸದ್ಯ ಇಟಲಿಯ ಲೇಕ್ ಕೋಮೋದಲ್ಲಿಯೇ ಇದೆ. ಅಲ್ಲಿಯೇ ಎಲ್ಲರೂ ಒಟ್ಟಿಗೆ ನಿಂತು ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ

ಅಂಜನಾ ವಿದೇಶಿ ಹುಡುಗನ ಜೊತೆ 13 ವರ್ಷದಿಂದ ಪ್ರೀತಿಯಲ್ಲಿದ್ದರು. ಅಂಜನಾ ತನ್ನ 13 ವರ್ಷದ ಲವ್ ಸ್ಟೋರಿಯನ್ನ ಇದೀಗ ಮನೆಯವರಿಗೆ ತಿಳಿಸಿದ್ದಾರೆ. ವಿದೇಶಿ ಹುಡುಗನ ಜೊತೆ ಅಂಜನಾ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ.

ಈ ಮೂಲಕ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಕೂಡಿ ಬಂದಿದೆ. ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ತನ್ನ ಗೆಳೆಯನ ಫೋಟೋ ರಿವೀಲ್ ಮಾಡಿದ್ದಾರೆ. ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಗೆಳಯನ ಜೊತೆ ಫೋಟೋ ಶೂಟ್‌ ಮಾಡಿಸಿಕೊಂಡಿರುವ ಅಂಜನಾ ಅರ್ಜುನ್‌ ಅವರು ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ. 

ಅಂಜನಾ ಮುದ್ದಿನ ಹುಡುಗನಿಗೆ ಶುಭಾಶಯ ತಿಳಿಸಿರೋ ಅರ್ಜುನ್ ಸರ್ಜಾ ಕುಟುಂಬ ಕೂಡ ಫೋಟೋ ಶೂಟ್‌ನಲ್ಲಿ ಭಾಗಿಯಾಗಿ ಸಖತ್ ಪೋಸ್ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow