3 ಕಣ್ಣು, 2 ಮೂಗು, 2 ನಾಲಿಗೆಯ ಕರು ಜನನ: ಏನಿದು ಅಚ್ಚರಿ!?

ಅಕ್ಟೋಬರ್ 20, 2024 - 22:05
 0  21
3 ಕಣ್ಣು, 2 ಮೂಗು, 2 ನಾಲಿಗೆಯ ಕರು ಜನನ: ಏನಿದು ಅಚ್ಚರಿ!?

ವಿಜಯಪುರ: ನಮ್ಮ ಸುತ್ತಮುತ್ತ ನಡೆಯುವ ಕೆಲವು ಘಟನೆಗಳನ್ನು ನಮಗೆ ನಂಬಲು ಕಷ್ಟವಾಗುತ್ತದೆ. ಈ ರೀತಿಯ ವಿಸ್ಮಯಗಳನ್ನು ನಂಬಲು ಕಷ್ಟವಾದರೂ ನಂಬಲೇಬೇಕು. ಒಂದೇ ಮುಖದಲ್ಲಿ ಮೂರು ಕಣ್ಣು, ಎರಡು ಮೂಗು, ಎರಡು ನಾಲಿಗೆಯ ಆಕಳ ಕರುವಿನ ಜನ್ಮವಾಗಿದ್ದು ಜೀವ ವೈವಿಧ್ಯತೆಯಲ್ಲಿ ವಿಸ್ಮಯವಾಗಿದೆ. ತಾಲೂಕಿನ ಬಾಬಾನಗರ ಗ್ರಾಮದ ರೈತ ಮಹಿಳೆ ಸಾವಿತ್ರಿ ಬಸವರಾಜ ನಾಗೂರಿ ಎಂಬುವವರ ಜರ್ಸಿ ಆಕಳು ಜನ್ಮ ನೀಡಿದೆ. ಸ್ಥಳಕ್ಕೆ ಪಶು ವೈದ್ಯರು ಆಗಮಿಸಿ ತಪಾಸಣೆ ನಡೆಸಿದ್ದು,

ಆಕಳ ಕರು ಆರೋಗ್ಯವಾಗಿದೆ. ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ. ವಿಚಿತ್ರವಾದ ಈ ಮೂಖ ಪ್ರಾಣಿಯ ವಿಸ್ಮಯ ನೋಡಲು ಸುತ್ತಮುತ್ತಲಿನ ಜನ ಆಗಮಿಸುತ್ತಿದ್ದಾರೆ.
ಮೊಬೈಲ್ ನಲ್ಲಿ ಫೋಟೊ ಹಾಗೂ ವಿಡಿಯೋ ತೆಗೆದುಕೊಂಡು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow