6 ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಸೈಫ್ ಅಲಿ ಖಾನ್! ಮನೆಯ ಸುತ್ತಲೂ ಫುಲ್ ಟೈಟ್ ಸೆಕ್ಯೂರಿಟಿ!

ಜನವರಿ 21, 2025 - 18:01
 0  14
6 ದಿನದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಸೈಫ್ ಅಲಿ ಖಾನ್! ಮನೆಯ ಸುತ್ತಲೂ ಫುಲ್ ಟೈಟ್ ಸೆಕ್ಯೂರಿಟಿ!

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ್ದ ಆರೋಪಿಯನ್ನು ಕೊನೆಗೂ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಂಗ್ಲಾ ಮೂಲದವನು ಎನ್ನಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಕೋರ್ಟ್ಆತನನ್ನು ಪೊಲೀಸ್ಕಸ್ಟಡಿಗೆ ಒಪ್ಪಿಸಿದೆ. ಅತ್ತ ಸೈಫ್ ಅಲಿ ಖಾನ್ ಚೇತರಿಸಿಕೊಳ್ತಿದ್ದುಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಇಂದು ಸೈಫ್ ಡಿಸ್ಚಾರ್ಜ್ ಆಗಿ ಮನೆ ತಲುಪಿದ್ದಾರೆ.

.16ರಂದು ಸೈಫ್ ಅಲಿ ಖಾನ್ ಚಾಕು ಇರಿದ ಘಟನೆ ಜರುಗಿತ್ತು. ದಾಳಿಕೋರನೊಬ್ಬ ಚಾಕುವಿನಿಂದ ಚುಚ್ಚಿದ ಹಿನ್ನೆಲೆ ಕುತ್ತಿಗೆ, ಕೈ ಸೇರಿ 6 ಕಡೆ ಗಂಭೀರ ಗಾಯಗಳಾಗಿತ್ತು. 2 ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಸೈಫ್ ಚೇತರಿಸಿಕೊಂಡಿದ್ದಾರೆ. 6 ದಿನಗಳ ನಂತರ,

ಇಂದು ಮಧ್ಯಾಹ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ನಟನಿಗೆ ಮನೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ನಟ ಮನೆಗೆ ತಲುಪಿದ್ದು, ಅವರ ನಿವಾಸದ ಸುತ್ತಲೂ ಹೆಚ್ಚಿನ ಭದ್ರತೆ ನೀಡಲಾಗಿದೆ. ಇನ್ನೂ ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಆರೋಪಿಯನ್ನು .19ರಂದು ಮುಂಬೈ ಕೋರ್ಟ್ 5 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow