Asia Cup 2025: ಇಂದು ಮತ್ತೊಮ್ಮೆ ರೋಚಕ ಹಣಾಹಣಿ: ಸೂಪರ್‌ ಸಂಡೇ ಭಾರತ-ಪಾಕ್‌ ಮುಖಾಮುಖಿ

ಸೆಪ್ಟೆಂಬರ್ 21, 2025 - 09:13
 0  30
Asia Cup 2025: ಇಂದು ಮತ್ತೊಮ್ಮೆ ರೋಚಕ ಹಣಾಹಣಿ: ಸೂಪರ್‌ ಸಂಡೇ ಭಾರತ-ಪಾಕ್‌ ಮುಖಾಮುಖಿ

ಇಂದು ಏಷ್ಯಾಕಪ್​ನಲ್ಲಿ ಭಾರತ ಮತ್ತ ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಲೀಗ್ ಹಂತದಲ್ಲಿಯೂ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 7 ವಿಕೆಟ್‌ಗಳಿಂದ ಗೆದ್ದಿತ್ತು. ಇದು ಇಬ್ಬರ ನಡುವಿನ ಎರಡನೇ ಮುಖಾಮುಖಿಯಾಗಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಸೂಪರ್ 4 ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಳೆದ ಭಾನುವಾರ ಪಾಕ್‌ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಆದ್ರೆ ಈ ಪಂದ್ಯದ ಟಾಸ್‌ ವೇಳೆ ಹಾಗೂ ಪಂದ್ಯದ ಗೆದ್ದ ಬಳಿಕ ಭಾರತೀಯ ಆಟಗಾರರು ಹ್ಯಾಂಡ್‌ ಶೇಕ್‌ ಮಾಡೋದನ್ನ ಬಿಟ್ಟಿದ್ದರು. ಸದ್ಯ ಹ್ಯಾಂಡ್‌ ಶೇಕ್‌ ವಿವಾದ ತೀವ್ರತೆ ಕಡಿಮೆಯಾಗುವ ಮುನ್ನವೇ ಭಾರತ-ಪಾಕ್‌ ಸೂಪರ್‌ ಫೋರ್‌ನಲ್ಲಿ ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವುದು ಭಾರೀ ಥ್ರಿಲ್ಲಿಂಗ್‌ ಆಗಿಸಿದೆ.

ಕಳೆದ ಏಪ್ರಿಲ್‌ 22ರಂದು ನಡೆದ ಪಹಲ್ಗಾಮ್‌ ಭಯೋತ್ಪಾದಕ ದಾಳಿ ಹಾಗೂ ಆಪರೇಷನ್‌ ಸಿಂಧೂರ ಪ್ರತೀಕಾರದ ಬಳಿಕ ಭಾರತ ಪಾಕ್‌ ಮುಖಾಮುಖಿಯಾಗಿರುವ ಮೊದಲ ಟೂರ್ನಿ ಇದಾಗಿದೆ. ಲೀಗ್‌ ಸುತ್ತಿನಲ್ಲಿ ಮೊದಲಬಾರಿಗೆ ಮುಖಾಮುಖಿಯಾದಾಗ ಪಂದ್ಯ ರದ್ದುಗೊಳಿಸಬೇಕು,

ಶತ್ರು ರಾಷ್ಟ್ರದ ವಿರುದ್ಧ ಭಾರತ ಆಡದಂತೆ ನಿಷೇಧಿಸಬೇಕು ಎಂಬ ಕೂಗು ಕೇಳಿಬಂದಿತ್ತು. ಸೋಷಿಯಲ್‌ ಮೀಡಿಯಾದಲ್ಲೂ ಬಾಯ್ಕಾಟ್‌ ಅಭಿಮಾನ ಸದ್ದು ಮಾಡಿತ್ತು. ಇದೆಲ್ಲದರ ಹೊರತಾಗಿಯೂ ಪಂದ್ಯವಾಡಿದ್ದ ಭಾರತ, ಮೈದಾನದಲ್ಲೇ ಪಾಕ್‌ ಆಟಗಾರರ ಮಾತ ಕಳೆದಿತ್ತು. ಇಂದು ಮತ್ತೊಮ್ಮೆ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು, ತೀವ್ರತೆ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow