Asia cup 2025: ಟೀಮ್ ಇಂಡಿಯಾ ಭರ್ಜರಿ ಗೆಲುವು..! ಪಾಕ್'ಗೆ ಮತ್ತೆ ಮುಖಭಂಗ

ಸೆಪ್ಟೆಂಬರ್ 22, 2025 - 09:07
 0  31
Asia cup 2025: ಟೀಮ್ ಇಂಡಿಯಾ ಭರ್ಜರಿ ಗೆಲುವು..! ಪಾಕ್'ಗೆ ಮತ್ತೆ ಮುಖಭಂಗ

ದುಬೈ:ಏಷ್ಯಾಕಪ್ ಸೂಪರ್-4 ಹಂತದ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತು. ಓಪನರ್ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ 172 ರನ್ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಸಾಹಿಬ್‌ಜಾದಾ ಫರ್ಹಾನ್ 58 (45 ಎಸೆತ, 3 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರೆ, ಸೈಮ್ ಆಯುಬ್ (21), ನವಾಜ್ (21), ಫಹೀಮ್ ಆಶ್ರಫ್ (20) ಹಾಗೂ ಕ್ಯಾಪ್ಟನ್ ಸಲ್ಮಾನ್ (17) ಕೊಡುಗೆ ನೀಡಿದರು.

ಇದಕ್ಕೆ ಪ್ರತಿಯಾಗಿ ಭಾರತ ಆರಂಭದಿಂದಲೇ ಬಲಿಷ್ಠ ಬ್ಯಾಟಿಂಗ್ ಪ್ರದರ್ಶಿಸಿತು. ಓಪನರ್ ಅಭಿಷೇಕ್ ಶರ್ಮಾ ಕೇವಲ 39 ಎಸೆತಗಳಲ್ಲಿ 74 (6 ಬೌಂಡರಿ, 5 ಸಿಕ್ಸರ್) ರನ್ ಬಾರಿಸಿದರು. ಶುಭ್‌ಮನ್ ಗಿಲ್ 47 (28 ಎಸೆತ, 8 ಬೌಂಡರಿ) ರನ್ ಗಳಿಸಿದರು. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಡಕೌಟ್ ಆದರೂ, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು.

ಕೊನೆಗೆ ಭಾರತ ಗುರಿ ತಲುಪಿದ್ದು, ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಇದು ಭಾರತದ 2ನೇ ಸತತ ಜಯವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow