Auto Fare Hike: ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಆಟೋ ಚಾಲಕರಿಂದ ಬಿಗ್ ಶಾಕ್‌!

ಜನವರಿ 5, 2025 - 16:13
 0  18
Auto Fare Hike: ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಆಟೋ ಚಾಲಕರಿಂದ ಬಿಗ್ ಶಾಕ್‌!

ರಾಜ್ಯ ರಾಜಧಾನಿ ಬೆಂಗಳೂರು ಮತ್ತಷ್ಟು ದುಬಾರಿಯಾಗಲಿದೆ. KSRTC ಹಾಗೂ BMTC ಟಿಕೆಟ್ ದರ ರಾಜ್ಯಾದ್ಯಂತ ಹೆಚ್ಚಳವಾಗುತ್ತಿದೆಇದರ ಬೆನ್ನಲ್ಲೇ ಆಟೋರಿಕ್ಷಾ ಪ್ರಯಾಣ ದರ ಕೂಡ ಏರಿಕೆ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಆಟೋರಿಕ್ಷಾ ಪ್ರಯಾಣ ದರ ಏರಿಕೆ ಮಾಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಕೆಲ ಆಟೋ ಚಾಲಕ ಸಂಘಟನೆಗಳು ಮನವಿ ಮಾಡಿವೆ.

ಒಂದು ಕಿಲೋಮೀಟರ್​​ಗೆ 5 ರೂಪಾಯಿ, ಎರಡು ಕಿಲೋಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಮಾಡಿವೆ. ಸದ್ಯ ಆಟೋರಿಕ್ಷಾ ಪ್ರಯಾಣ ದರ ಕಿಲೋಮೀಟರ್ಗೆ 30 ರೂಪಾಯಿ ಇದೆ. ಇದೀಗ 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಿವೆ.

ದರ ಏರಿಕೆ ಸಂಬಂಧ 2024 ಡಿಸೆಂಬರ್​ 23 ರಂದು ಅಸೋಸಿಯೇಷನ್ಗಳ ಸಭೆ ಕರೆಯಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಯಿತು. ಈಗ ಮತ್ತೆ ಇದೇ ತಿಂಗಳು ಮೂರನೇ ವಾರದಲ್ಲಿ ಸಭೆ ನಡೆಯಲಿದ್ದು, ಪ್ರಯಾಣ ದರ ಏರಿಕೆ ಬಗ್ಗೆ ತೀರ್ಮಾನ ಆಗಲಿದೆ.

ಆದರೆ, ಆಟೋ ಸಂಘಟನೆಗಳಲ್ಲೇ ದರ ಏರಿಕೆ ಬಗ್ಗೆ ಒಮ್ಮತ್ತವಿಲ್ಲ. ಬೈಕ್ ಟ್ಯಾಕ್ಸಿ ಬ್ಯಾನ್ ಆಗುವವರೆಗೂ ಆಟೋ ಪ್ರಯಣಾ ದರ ಏರಿಕೆ ಬೇಡ ಎನ್ನುತ್ತಿದ್ದಾರೆ. ಎಲ್ಲ ಚಾಲಕ ಸಂಘಟನೆಗಳಿಂದ ಒಂದೇ ಅಭಿಪ್ರಾಯ ನೀಡಿದ ಬಳಿಕ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ದರ ಏರಿಕೆ ಮಾಡಲಿದ್ದಾರೆ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow