BBK 11 Grand Finale: ಬಿಗ್ ಬಾಸ್ ಟಾಪ್ ಐದರಲ್ಲಿ ಘಟಾನುಘಟಿಗಳು.! ಹಾಗಾದ್ರೆ ಗೆಲ್ಲೋದು ಯಾರು..?

ಜನವರಿ 26, 2025 - 17:59
 0  12
BBK 11 Grand Finale: ಬಿಗ್ ಬಾಸ್ ಟಾಪ್ ಐದರಲ್ಲಿ ಘಟಾನುಘಟಿಗಳು.! ಹಾಗಾದ್ರೆ ಗೆಲ್ಲೋದು ಯಾರು..?

ಬಿಗ್ ಬಾಸ್ ಕನ್ನಡ ಸೀಸನ್ 11’ರ ವಿನ್ನರ್ ಯಾರು ಎಂದು ತಿಳಿದುಕೊಳ್ಳಲು ಇನ್ನು ಕೆಲವೇ ಗಂಟೆಗಳು ಉಳಿದಿವೆ. ಕಳೆದ 117 ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಬಿಗ್ ಬಾಸ್ ಇಂದು (ಜನವರಿ 26) ಕೊನೆ ಆಗಲಿದೆ. ಕಪ್ ಯಾರ ಕೈ ಸೇರುತ್ತದೆ ಎಂಬುದು ಮಧ್ಯರಾತ್ರಿಯಲ್ಲಿ ಘೋಷಣೆ ಆಗಲಿದೆ. ಈ ಬಾರಿ ಮೋಕ್ಷಿತಾ ಪೈ, ರಜತ್, ಮಂಜು, ತ್ರಿವಿಕ್ರಂ ಹಾಗೂ ಹನುಮಂತ ಇದ್ದಾರೆ. ಎಲ್ಲರೂ ಘಟಾನುಘಟಿಗಳೇ. ಇವರ ಪೈಕಿ ಕಪ್ ಯಾರಿಗೆ ಒಲಿಯುತ್ತದೆ ಎನ್ನುವ ಕುತೂಹಲ ಮೂಡಿದೆ. 

ಶನಿವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ವಿನ್ನರ್​ ಆಗುವ ಸ್ಪರ್ಧಿಯ ಒಟ್ಟು ವೋಟ್ಸ್​ಗಳನ್ನು ಎಲ್ಲರ ಮುಂದೆ ಕಿಚ್ಚ ಸುದೀಪ್ ಅವರು ಬಹಿರಂಗ ಪಡಿಸಿದ್ದಾರೆ. ಇದೇ  ಮೊದಲು, ಮೊಟ್ಟ ಮೊದಲ ಸ್ಥಾನದಲ್ಲಿರೋ ಸ್ಪರ್ಧಿಗೆ ಎಷ್ಟು ವೋಟ್ ಬಂದಿದೆ ಅಂತ ಗೊತ್ತಾಗಿದೆ. ಮೊದಲ ಸ್ಥಾನದಲ್ಲಿ ಯಾವ ಸ್ಪರ್ಧಿ ಅತಿ ಹೆಚ್ಚು ವೋಟ್ಸ್​ ಪಡೆದುಕೊಂಡಿದ್ದಾರೆ ಅಂತ ಮಾತ್ರ ರಿವೀಲ್​ ಮಾಡಿಲ್ಲ. ಇದೇ ಗ್ರಾಫ್​ ಅನ್ನು ನೋಡಿ ಫೈನಲಿಸ್ಟ್​ಗಳ ಜೊತೆಗೆ ವೀಕ್ಷಕರು ಸಹ ಸ್ಪರ್ಧಿಗಳು ಕೂಡ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ.​

ಎಲ್ಲರ ಮುಂದೆ ಕಿಚ್ಚ ಸುದೀಪ್​ ಅವರು ಬಿಗ್ ಬಾಸ್ ಮನೆಯಲ್ಲಿ ಒಂದು ದೊಡ್ಡ ಬೋರ್ಡ್ ಇಟ್ಟಿದ್ದರು. ಆ ಬೋರ್ಡ್‌ನಲ್ಲಿ ನಂಬರ್‌ಗಳ ವಿವರಗಳನ್ನು ಹಾಕಲಾಗತ್ತು. ಅದನ್ನು ಸ್ಪರ್ಧಿಗಳ ಮುಂದೆ ರಿವೀಲ್ ಮಾಡಲಾಗಿತ್ತು. ಕೋಟಿ ಕೋಟಿ ಲೆಕ್ಕದಲ್ಲಿ ಬಂದ ವೋಟ್ಸ್​ ನೋಡಿ ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ. ಅತಿ ಹೆಚ್ಚು ವೋಟ್ ಪಡೆದು ವಿನ್ ಆಗಲಿರುವ ಸ್ಪರ್ಧಿ ಯಾರು ಅಧಿಕೃತವಾಗದಿದ್ದರು ಆ ಸ್ಪರ್ಧಿಗೆ ಎಷ್ಟು ಮತ ಬಂದಿದೆ ಎಂದು ತಿಳಿಸಿದ್ದಾರೆ. (5,23,89,318) 5 ಕೋಟಿ 23 ಲಕ್ಷದ 89 ಸಾವಿರದ 318 ವೋಟ್ಸ್​ ಅನ್ನು ಪಡೆದುಕೊಂಡು ಯಾವ ಸ್ಪರ್ಧಿ ಈ ಬಾರಿಯ ಬಿಗ್​ಬಾಸ್​ ಸೀಸನ್ 11 ವಿನ್ನರ್​ ಆಗಲಿದ್ದಾರೆ ಅಂತ ಇಂದಿನ ಎಪಿಸೋಡ್​ನಲ್ಲಿ ತಿಳಿದು ಬರಲಿದೆ.​

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow