BBK11: ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್: ಸ್ಟ್ರಾಂಗ್ ಸ್ಪರ್ಧಿ ಎಂದುಕೊಂಡಿದ್ದವರೆ ಔಟ್!

ಅಕ್ಟೋಬರ್ 26, 2024 - 20:03
 0  105
BBK11: ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್: ಸ್ಟ್ರಾಂಗ್ ಸ್ಪರ್ಧಿ ಎಂದುಕೊಂಡಿದ್ದವರೆ ಔಟ್!

ತಾಯಿಯ ನಿಧನದಿಂದ ನೊಂದಿರುವ ಕಿಚ್ಚ ಸುದೀಪ್ ಈ ವಾರ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಜಾಗಕ್ಕೆ ಈ ವಾರ ಬೇರೆ ಕಲಾವಿದರು ಶೋ ನಡೆಸಿಕೊಡಲಿದ್ದಾರೆ. ಹೀಗಾಗಿ ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯಲಿದೆ. 

ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ತಿಂಗಳು ಪೂರ್ಣಗೊಳ್ಳುವ ಹಂತದಲ್ಲಿದೆ. ಆರಂಭದಿಂದಲೂ ಕಾರ್ಯಕ್ರಮವು ವೀಕ್ಷಕರ ಗಮನವನ್ನು ಸೆಳೆಯುತ್ತಿದೆ. ಕಳೆದ ವಾರದ ಮಧ್ಯದಲ್ಲಿ ಜಗದೀಶ್‌ ಮತ್ತು ರಂಜಿತ್‌ ಎಲಿಮಿನೇಟ್‌ ಆದರು.

ಆ ಬಳಿಕ ಮನೆಗೆ ವೀಕೆಂಡ್‌ನಲ್ಲಿ ಸಿಂಗರ್‌ ಹನುಮಂತ ವೈಲ್ಡ್‌ ಕಾರ್ಡ್‌ ಎಂಟ್ರಿ ಪಡೆದರು. ಆಟ ಮತ್ತೆ ತಿರುವು ಪಡೆಯಿತು. ಈ ವಾರ ವೀಕೆಂಡ್‌  ಎಪಿಸೋಡ್‌ ಗೆ ಕಿಚ್ಚ ಸುದೀಪ್‌ ಬರುವುದಿಲ್ಲ. ಕಿಚ್ಚನ ಅನುಪಸ್ಥಿತಿಯಲ್ಲಿ ಎಲಿಮಿನೇಷನ್‌ ನಡೆಯಲಿದೆ.   

ಭವ್ಯ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್‌ ಸುರೇಶ್ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್‌ ಆಗಿದ್ದರು. ಇವರಲ್ಲಿ ಮಾನಸಾ ಅವರ ಕೆಲವು ವರ್ತನೆಗಳು ಜನರ ಮನಸ್ಸಿಗೆ ಹಿಡಿಸುತ್ತಿಲ್ಲ ಎನ್ನಲಾಗುತ್ತಿದೆ. 

ಸೋಷಿಯಲ್‌ ಮೀಡಿಯಾ ಸಮೀಕ್ಷೆಗಳನ್ನು ಪರಿಗಣಿಸಿದಾಗ, ಭವ್ಯ, ಚೈತ್ರ, ಗೌತಮಿ, ಮೋಕ್ಷಿತಾ, ಶಿಶಿರ್ ಮೊದಲಿಗೆ ಸೇವ್‌ ಆಗಿದ್ದು ಮನೆಯಲ್ಲಿ ಆಟ ಮುಂದುವರೆಸಲಿದ್ದಾರೆ. 

ಹಂಸ, ಗೋಲ್ಡ್‌ ಸುರೇಶ್ ಮತ್ತು ಮಾನಸ ಅಪಾಯದ ವಲಯದಲ್ಲಿದ್ದಾರೆ. ಮತದಾನದ ಭವಿಷ್ಯ ನಿಜವಾದರೆ, ವಾರಾಂತ್ಯದ ಸಂಚಿಕೆಯಲ್ಲಿ ಹಂಸ ಅಥವಾ ಮಾನಸ ಎಲಿಮಿನೇಟ್‌  ಆಗಲಿದ್ದಾರೆ ಎನ್ನಲಾಗುತ್ತಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow