Bigg Boss 18 Promo: ಹಿಂದಿ ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್: ಪ್ರೋಮೋ ಔಟ್, ಹೊಸ ಆಟ ಸ್ಟಾರ್ಟ್!

ಸೆಪ್ಟೆಂಬರ್ 23, 2024 - 20:06
 0  15
Bigg Boss 18 Promo: ಹಿಂದಿ ಬಿಗ್‌ ಬಾಸ್‌ ಆರಂಭಕ್ಕೆ ಡೇಟ್‌ ಫಿಕ್ಸ್: ಪ್ರೋಮೋ ಔಟ್, ಹೊಸ ಆಟ ಸ್ಟಾರ್ಟ್!

ಬಿಗ್​ ಬಾಸ್​ ಕನ್ನಡ ಸೀಸನ್​  11 ಶುರುವಾಗ್ತಿದೆ. ಸೆಪ್ಟೆಂಬರ್ 29 ರಿಂದಲೇ ಮನೆ ಮನೆಯಲ್ಲೂ ಬಿಗ್​ ಬಾಸ್ ಕಹಳೆ ಮೊಳಗಲಿದೆ. ಕಲರ್ಸ್‌ ಕನ್ನಡ, ಇದೀಗ ಹೊಸ ಪ್ರೋಮೋ ಹೊರತಂದಿದೆ. ಈ ಪ್ರೋಮೋ ಬಿಗ್​ ಬಾಸ್​ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟಾಗಿಸಿದೆ. ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂದ ಕಿಚ್ಚ ಸುದೀಪ್​, ಹೊಸ ಅಧ್ಯಾಯದಲ್ಲೂ ಅದೇ ಕಿಚ್ಚು ಅಂತಿದ್ದಾರೆ.

ಇದರ ಬೆನ್ನಲ್ಲೇ ಹಿಂದಿಯ ಬಿಗ್ ಬಾಸ್ 18' ಗಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಸಲ್ಮಾನ್ ಖಾನ್ ನಿರೂಪಣೆಯಲ್ಲಿ ಬರಲಿರುವ ಬಿಗ್ ಬಾಸ್ ಸೀಸನ್ ರ 18ರ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 6 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ 'ಬಿಗ್ ಬಾಸ್ 18' ಆರಂಭವಾಗಲಿದೆ.

'ಬಿಗ್ ಬಾಸ್ OTT 3' ಮುಗಿದ ನಂತರ ಅಭಿಮಾನಿಗಳು 'ಬಿಗ್ ಬಾಸ್ 18' ಗಾಗಿ ಕಾಯ್ತಿದ್ದರು. ಸ್ವಲ್ಪ ಸಮಯದ ಹಿಂದೆ ಪ್ರೋಮೋ ಬಂದಿತ್ತು. ಆದರೆ ದಿನಾಂಕ ಘೋಷಣೆ ಮಾಡಿರಲಿಲ್ಲ. 'ಬಿಗ್ ಬಾಸ್ 18' ರ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 6 ರಂದು ನಡೆಯಲಿದೆ. ಅಂದೇ ಸ್ಪರ್ಧಿಗಳನ್ನು ಅಂತಿಮ ಹೆಸರು ಬಹಿರಂಗವಾಗಲಿದೆ.

ಕಲರ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ. ಅದರ ಶೀರ್ಷಿಕೆ ಹೀಗಿದೆ, 'ಈ ಬಾರಿ ಮನೆಯಲ್ಲಿ ಭೂಕಂಪ ಆಗಲಿದೆ. ಏಕೆಂದರೆ ಬಿಗ್‌ಬಾಸ್‌ನಲ್ಲಿ ಸಮಯದ ಉತ್ಸಾಹ ಇರುತ್ತದೆ. ಅಕ್ಟೋಬರ್ 6 ರಂದು ರಾತ್ರಿ 9 ಗಂಟೆಗೆ 'ಬಿಗ್ ಬಾಸ್ 18' ಗ್ರ್ಯಾಂಡ್ ಪ್ರೀಮಿಯರ್ ಅನ್ನು ಕಲರ್ಸ್ ಮತ್ತು ಜಿಯೋದಲ್ಲಿ ಮಾತ್ರ ವೀಕ್ಷಿಸಿ.

ಇನ್ನು ವೀಡಿಯೊದಲ್ಲಿ ಸಲ್ಮಾನ್ ಖಾನ್ 'ಬಿಗ್ ಬಾಸ್ 18' ಥೀಮ್ ಹೇಳಿದ್ದಾರೆ. ಈ ಬಾರಿಯ ಥೀಮ್‌ನ ಹೆಸರು 'ಟೈಮ್ ಕಾ ತಾಂಡವ್' ಮತ್ತು ಇಡೀ ಸೀಸನ್ ಇದನ್ನು ಆಧರಿಸಿದೆ. ಪ್ರತಿ ವರ್ಷ ಬಿಗ್ ಬಾಸ್ ಥೀಮ್ ಬದಲಾಗುತ್ತದೆ, ಅದರಂತೆ ಈ ಬಾರಿಯೂ ಅದಾಗುತ್ತಿದೆ. ಸೀಸನ್ 18 ಆಗಿದ್ದರೆ, ಸ್ಪರ್ಧಿಗಳಿಗೂ 18 ವರ್ಷ ವಯಸ್ಸಾಗಿರುತ್ತದೆ ಎಂದಿದ್ದಾರೆ.
ಬಿಗ್ ಬಾಸ್ ಮನೆಗೆ ಯಾರೆಲ್ಲ ಎಂಟ್ರಿ ನೀಡ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಕರಣ್ವೀರ್ ಮೆಹ್ರಾ, ಶೆಹಜಾದಾ ಧಾಮಿ, ಚಾಹತ್ ಪಾಂಡೆ, ಶೋಯೆಬ್ ಇಬ್ರಾಹಿಂ, ಧೀರಜ್ ಕಪೂರ್ ಮತ್ತು ನಿಯಾ ಶರ್ಮಾ ಅವರುಗಳ ಹೆಸರು ಕೇಳಿ ಬಂದಿದೆ.

 ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow