ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳ!

ಸೆಪ್ಟೆಂಬರ್ 24, 2024 - 08:06
 0  7
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳ!

ನವದೆಹಲಿ:- ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರದಲ್ಲೇ ಶೇ. 3-4 ಡಿಎ ಹೆಚ್ಚಳವಾಗಲಿದ್ದು, ಈ ಮೂಲಕ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.  ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಹೆಚ್ಚಳವಾಗಬಹುದು. ಜುಲೈ 1ರಿಂದ ಅನ್ವಯ ಆಗುವಂತೆ ತುಟ್ಟಿಭತ್ಯೆಯು ಉದ್ಯೋಗಿಗಳಿಗೆ ಸಿಗಲಿದೆ. ಮೂರು ತಿಂಗಳ ಅರಿಯರ್ಸ್ ಸಮೇತ ಡಿಎ ಸಿಗಲಿದೆ ಎನ್ನಲಾಗಿದೆ. 

ಜನವರಿಯಿಂದ ಜೂನ್​ವರೆಗಿನ ಡಿಎ ಅನ್ನು ಶೇ. 4ರಷ್ಟು ಹೆಚ್ಚಳ ಮಾಡಲಾಗಿತ್ತು. ಮೂಲ ವೇತನದ ಮೊತ್ತಕ್ಕೆ ಹೆಚ್ಚುವರಿಯಾಗಿ ನೀಡಲಾಗುವ ಡಿಎ ಸದ್ಯ ಶೇ. 50ಕ್ಕೆ ಏರಿದೆ. ಈ ಬಾರಿ, ಅಂದರೆ ಜುಲೈನಿಂದ ಡಿಸೆಂಬರ್​ವರೆಗಿನ ಅವಧಿಗೆ ಡಿಎ ಶೇ. 4ಕ್ಕಿಂತ ತುಸು ಕಡಿಮೆ ಇರುವ ನಿರೀಕ್ಷೆ ಇದೆ. ಶೇ. 3.50ರಷ್ಟು ಡಿಎ ಏರಿಕೆ ಮಾಡಬಹುದು ಎನ್ನಲಾಗುತ್ತಿದೆ

ಹಣದುಬ್ಬರದ ಪರಿಣಾಮವಾಗಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಳವಾದರೂ ಹೆಚ್ಚು ಉಪಯೋಗವಾಗದಂತಾಗುತ್ತದೆ. ಉದಾಹರಣೆಗೆ, ಉದ್ಯೋಗಿಯ ಸಂಬಳ ಶೇ. 10ರಷ್ಟು ಹೆಚ್ಚಳವಾಯಿತೆಂದಿಟ್ಟುಕೊಳ್ಳಿ. ಅದೇ ಸಂದರ್ಭದಲ್ಲಿ ಹಣದುಬ್ಬರ ಶೇ. 6ರಷ್ಟು ಇತ್ತು ಎಂದಾದರೆ ಉದ್ಯೋಗಿಗೆ ಸಿಗುವ ನೈಜ ಸಂಬಳ ಹೆಚ್ಚಳ ಶೇ. 4 ಮಾತ್ರವೇ ಆಗಿರುತ್ತದೆ. ಹೀಗಾಗಿ, ವೇತನ ಆಯೋಗವು ಉದ್ಯೋಗಿಗೆ ಡಿಯರ್ನೆಸ್ ಅಲೋಯನ್ಸ್ ಅನ್ನು ನೀಡುವ ಪರಿಪಾಠ ಮಾಡಿಕೊಂಡು ಬಂದಿದೆ. ಇದು ಹಣದುಬ್ಬರ ಪರಿಣಾಮವನ್ನು ಕಡಿಮೆ ಮಾಡಲು ಇರುವ ವಿಧಾನ.

ಡಿಎ ಅನ್ನು ಮೂಲ ವೇತನಕ್ಕೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಇಲ್ಲಿಯವರೆಗೆ ಶೇ. 50ರಷ್ಟು ಡಿಎ ಹೆಚ್ಚಳ ಮಾಡಲಾಗಿದೆ. ಡಿಎ ಎಂಬುದು ಹಾಲಿ ಕೆಲಸದಲ್ಲಿರುವ ಉದ್ಯೋಗಿಗಳಿಗೆ ನೀಡಲಾಗುತ್ತದೆ. ಡಿಆರ್ ಎಂಬುದು ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ನೀಡಲಾಗುವ ಭತ್ಯೆಯಾಗಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow