Bigg Boss Kannada 11: Bigg Boss ಮನೆಯಿಂದ ಈ ವಾರ ಔಟ್ ಆಗೋರು ಇವರೇ ನೋಡಿ..!

ಬಿಗ್ ಬಾಸ್ ಕನ್ನಡ ಸೀಸನ್ ಫಿನಾಲೆಗೆ ಕೆಲ ದಿನಗಳು ಮಾತ್ರ ಬಾಕಿ ಇದೆ. ಬಿಗ್ ಬಾಸ್ ರೋಚಕ ಘಟ್ಟದಲ್ಲಿ ಸಾಗುತ್ತಿದ್ದು, ಆಟದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಪರ್ಧಿಗಳ ನಡುವಿನ ಪೈಪೋಟಿಯು ಜೋರಾಗಿದೆ. ಬಿಗ್ ಬಾಸ್ ಸೀಸನ್ 11 ರ ಶೋ ಅಂತಿಮ ಘಟ್ಟಕ್ಕೆ ತಲುಪಲು ಕೆಲವೇ ದಿನಗಳು ಬಾಕಿ ಇದ್ದು, ಈ ವಾರ ಫಿನಾಲೆ ಟಿಕೆಟ್ ಆಟ ನಡೆಯುತ್ತಿದೆ.
ಈ ವಾರ ಪ್ರಮುಖರೇ ನಾಮಿನೇಟ್ ಆಗಿದ್ದು, ದೊಡ್ಮನೆಯಿಂದ ಹೊರ ಹೋಗುವವರು ಯಾರು ಎನ್ನುವ ಪ್ರಶ್ನೆ ಮೂಡಿದೆ. ಹಾಗಾದರೆ ಈ ವಾರ ನಾಮಿನೇಟ್ ಆದವರು ಯಾರು? ವೀಕ್ ಎನಿಸಿಕೊಂಡ ಸ್ಪರ್ಧಿ ಯಾರು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಈ ವಾರ ತ್ರಿವಿಕ್ರಮ್, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಹಾಗೂ ಧನರಾಜ್ ನಾಮಿನೇಟ್ ಆಗಿದ್ದಾರೆ. ಇವರಿಗೆ ಫಿನಾಲೆ ಟಿಕೆಟ್ ಕೂಡ ಕೈ ತಪ್ಪಿದೆ. ಯಾರಿಗೆ ಗೇಟ್ಪಾಸ್ ಸಿಗಲಿದೆ ಅನ್ನೋದು ಕಿಚ್ಚನ ಪಂಚಾಯ್ತಿಯಲ್ಲಿ ಗೊತ್ತಾಗಲಿದೆ.
ಚೈತ್ರಾ ಕುಂದಾಪುರ ಸೈಲೆಂಟ್ ಆಗಂತೂ ಇರಲಿಲ್ಲ. ಚೈತ್ರಾ ಕುಂದಾಪುರಗೂ ಹೊರಗೆ ಬೆಂಬಲ ಚೆನ್ನಾಗಿಯೇ ಇದೆ. ಆದರೆ, ಈ ವಾರ ಚೈತ್ರಾ ಕುಂದಾಪುರ ಡೇಂಜರ್ ಝೋನ್ನಲ್ಲಿದ್ದಾರೆ. ಚೈತ್ರಾ ಕುಂದಾಪುರಗೆ ಈ ವಾರ ಕಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಧನರಾಜ್ ಅವರಿಗೂ ಹೊರಗೆ ಬೆಂಬಲ ಚೆನ್ನಾಗಿದೆ. ಆದರೆ, ಈ ವಾರ ಧನರಾಜ್ಗೆ ತುಂಬಾ ಕ್ರೂಶಿಯಲ್ ಆಗಿದ್ದು, ಬೇಸರದ ಸುದ್ದಿ ಸಿಗುವ ಸಾಧ್ಯತೆಯೂ ಇದೆ.
ಅಲ್ಲದೇ ಇಂದಿನ ಕಿಚ್ಚನ ಎಪಿಸೋಡ್ನಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇಡೀ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ನಡೆದಿದೆ. ಈ ವೇಳೆ ನಡೆದ ಸರಿ ತಪ್ಪುಗಳು ಮತ್ತು ಫಿನಾಲೆಗೆ ಎಂಟ್ರಿ ನೀಡಲು ಸ್ಪರ್ಧಿಗಳನ್ನು ಮತ್ತಷ್ಟು ಹುರಿದುಂಬಿಸುವ ಕೆಲಸವನ್ನು ಮಾಡಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






