Covid 19: ಕರ್ನಾಟಕದಲ್ಲಿ ಕೊರೊನಾ ಭೀತಿ: ಸಾರ್ವಜನಿಕರಿಗೆ ಪ್ರಮುಖ ಸೂಚನೆ ನೀಡಿದ ಆರೋಗ್ಯ ಇಲಾಖೆ

ಬೆಂಗಳೂರು: ಮತ್ತೆ ವಕ್ಕರಿಸಿರುವ ಕೊರೊನಾ ಮಹಾಮಾರಿ ದಿನ ಕಳೆದಂತೆ ದೇಶಾದ್ಯಂತ ವ್ಯಾಪಕವಾಗಿ ಹಬ್ಬುತ್ತಿದೆ. ದಿನೇ ದಿನೇ ದೇಶದಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದು, ಇಂದಿಗೆ ಕೊರೊನಾ ಸಕ್ರಿಯ ಕೇಸ್ಗಳ ಸಂಖ್ಯೆ 2,710ಕ್ಕೆ ಏರಿಕೆ ಆಗಿದೆ. ರಾಜ್ಯ ಸರ್ಕಾರ ಜನರಲ್ಲಿ ಆತಂಕವನ್ನು ತಪ್ಪಿಸಲು ಮತ್ತು ರೋಗವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಂಡಿದೆ.
ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸುತ್ತೋಲೆ ಹೊರಡಿಸಿದೆ. ಜನರು ಆತಂಕ ಪಡಬಾರದು, ಜಾಗರೂಕರಾಗಿ ಇರಬೇಕು. ವಿದೇಶದಿಂದ ಬರುವ ಪ್ರಯಾಣಿಕರ ಮಾಹಿತಿಯನ್ನ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ.
ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು:
- ಜಾಗರೂಕರಾಗಿರಿ, ಆತಂಕಪಡಬೇಡಿ: ಅಧಿಕೃತ ಮೂಲಗಳ ಮೂಲಕ ಮಾಹಿತಿ ಪಡೆಯಿರಿ, ಪರಿಶೀಲಿಸದ ಮಾಹಿತಿಯನ್ನು ಪರಿಗಣಿಸದಿರಿ.
- ಆರೋಗ್ಯ ಸಿಬ್ಬಂದಿಯೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಿ: ಅಗತ್ಯ ಅನುಸರಣೆಗಾಗಿ ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ.
- ವಾಬ್ದಾರಿಯುತ ನಡವಳಿಕೆಯನ್ನು ಅಭ್ಯಾಸ ಮಾಡಿ: ಜನದಟ್ಟಣೆಯ ಸ್ಥಳಗಳಲ್ಲಿ mask ಧರಿಸಿ, ದೈಹಿಕ ಅಂತರವನ್ನು ಕಾಪಾಡಿಕೊಳ್ಳಿ, ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ.
- ರೋಗಲಕ್ಷಣಗಳನ್ನು ಮೊದಲೇ ವರದಿ ಮಾಡಿ: ಜ್ವರ, ಕೆಮ್ಮು, ಎದೆನೋವು ಅಥವಾ ಉಸಿರಾಟದ ತೊಂದರೆ ಅನುಭವಿಸಿದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ.
- ಬೆಂಬಲ ಪರೀಕ್ಷೆ ಮತ್ತು ಕಣಾವಲು: Random ಮಾದರಿಗಳ ಪರೀಕ್ಷೆಗೆ ಸಹಕರಿಸಿ ಮತ್ತು ಕಣಾವಲುಗಾಗಿ ಮಾದರಿ ಸಂಗ್ರಹವನ್ನು ಅನುಮತಿಸಿ.
- ಸಮುದಾಯ ಮೇಲ್ವಿಚಾರಣೆ: IHIP ಪೋರ್ಟಲ್ನ ಸಮುದಾಯ ಮೇಲ್ವಿಚಾರಣಾ ಉಪಕರಣದ ಮೂಲಕ COVID-19 ತರಹದ ರೋಗಲಕ್ಷಣಗಳಲ್ಲಿ ಅಸಾಮಾನ್ಯ ಹೆಚ್ಚಳವನ್ನು ವರದಿ ಮಾಡಿ.
- ಶಾಲೆಗಳಲ್ಲಿ ಕಣಾವಲು: ಅನಾರೋಗ್ಯ ಪೀಡಿತ ಮಕ್ಕಳನ್ನು ಮನೆಯಲ್ಲಿಯೇ ಇರಿಸಿ, ರೋಗಲಕ್ಷಣಗಳಿಗಾಗಿ ವಿದ್ಯಾರ್ಥಿಗಳನ್ನು ಮೇಲ್ವಿಚಾರಣೆ ಮಾಡಿ, ನೈರ್ಮಲ್ಯವನ್ನು ಉತ್ತೇಜಿಸಿ, ಸರಿಯಾದ ಗಾಳಿಯನ್ನು ಖಚಿತಪಡಿಸಿಕೊಳ್ಳಿ.
- ನೈರ್ಮಲ್ಯ ಮತ್ತು ಪರಿಸರ ಜಾಗೃತಿ: ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಿ, ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚವಾಗಿಡಿ.
- ಸರ್ಕಾರದ ಪ್ರತಿಕ್ರಿಯೆ: ಸರ್ಕಾರ ಎಚ್ಚರವಾಗಿದೆ; ಸಾಮಾನ್ಯ ಜೀವನವನ್ನು ನಡೆಸಿ ಆದರೆ ಸಲಹೆಗಳನ್ನು ಅನುಸರಿಸಿ.
- ಆರೋಗ್ಯ ಸಲಹೆಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1800 425 8330 ಗೆ ಕರೆ ಮಾಡಿ ಹಾಗೂ ರೋಗಿಗಳ ತುರ್ತು ಸಾಗಣೆಗೆ 108 ಗೆ ಕರೆ ಮಾಡಿ.
ನಿಮ್ಮ ಪ್ರತಿಕ್ರಿಯೆ ಏನು?






