Karnataka Rain: ರಾಜ್ಯದಲ್ಲಿ ಮುಂದಿನ ಐದು ದಿನ ಗಾಳಿ ಸಹಿತ ಜೋರು ಮಳೆ, ಯಾವೆಲ್ಲ ಜಿಲ್ಲೆಗಳಿಗೆ ಅಲರ್ಟ್?

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿರುವ ಐಎಂಡಿ, ಕೆಲವೆಡೆ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಿದೆ. ಕಳೆದ ಎರಡು ವಾರಗಳಿಂದ ರಾಜ್ಯಾದ್ಯಂತ ಭಾರಿ ಮಳೆಯಾಗಿದ್ದು ಅವಾಂತರ ಸೃಷ್ಟಿಸಿತ್ತು. ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಹೌದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಜೂನ್ 4ರಿಂದ ಮಳೆ ಕೊಂಚ ಹೆಚ್ಚಾಗಬಹುದು.
ಪುತ್ತೂರು, ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಮಾಣಿ, ಬಂಟವಾಳ, ಭಾಗಮಂಡಲ, ಧರ್ಮಸ್ಥಳ, ನಾಪೋಕ್ಲು, ಶಕ್ತಿನಗರ, ವಿರಾಜಪೇಟೆ, ಕಾರ್ಕಳ, ಚಿಕ್ಕಬಳ್ಳಾಪುರ, ಪೊನ್ನಂಪೇಟೆ, ಹಾರಂಗಿ, ಕೊಟ್ಟಿಗೆಹಾರ, ಶೃಂಗೇರಿ, ಜಯಪುರ, ಕೋಟಾ, ಮುಲ್ಕಿ, ಸಿದ್ದಾಪುರ, ಗೇರುಸೊಪ್ಪದಲ್ಲಿ ಮಳೆಯಾಗಿದೆ.
ಎಚ್ಎಎಲ್ನಲ್ಲಿ 27.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಉತ್ತರ ಒಳನಾಡಿನಲ್ಲಿ ಈ ಸಲ ಮೇಯಲ್ಲಿ 172.5 ಮಿ.ಮೀ. ಮಳೆಯಾಗಿದ್ದು, 1943ರಲ್ಲಿ ಸುರಿದಿದ್ದ 151.6 ಮಿ.ಮೀ. ಮಳೆಯ ದಾಖಲೆಯನ್ನು ಮುರಿದಿದೆ. ಕೊಪ್ಪಳ ಜಿಲ್ಲೆಯಲ್ಲಿ 1901ರ ಮೇ ತಿಂಗಳಲ್ಲಿ ಸುರಿದಿದ್ದ 129.3 ಮಿ.ಮೀ. ಮಳೆ ದಾಖಲೆಯಾಗಿತ್ತು. ಇದೀಗ 124 ವರ್ಷಗಳ ಅನಂತರ 2025ರ ಮೇಯಲ್ಲಿ ಸುರಿದ 165.9 ಮಿ.ಮೀ. ಮಳೆಯು ಹೊಸ ಐತಿಹಾಸಿಕ ದಾಖಲೆ ಸೃಷ್ಟಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






