ED Raid: ಕಾಂಗ್ರೆಸ್ ನಾಯಕಿ ಕುಸುಮಾಗೆ ಇಡಿ ಶಾಕ್: ವೀರೇಂದ್ರ ಪಪ್ಪಿ ಜೊತೆ ಲಿಂಕ್!
ಬೆಂಗಳೂರು: ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಅವರ ಮನೆ ಮೇಲೆ ನಡೆದ ದಾಳಿಯ ಮುಂದುವರೆದ ಭಾಗವಾಗಿ, ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮಾಜಿ ಅಭ್ಯರ್ಥಿ ಕುಸುಮ ಹನುಮಂತರಾಯಪ್ಪ ನಿವಾಸಕ್ಕೂ ಇಡಿ ದಾಳಿ ನಡೆದಿದೆ.
ಬೆಂಗಳೂರಿನ ಮುದ್ದಿಪಾಳ್ಯ ರಸ್ತೆಯಲ್ಲಿರುವ ಕುಸುಮ ಹನುಮಂತರಾಯಪ್ಪ ಮನೆಯಲ್ಲಿಗೆ ಬೆಳಿಗ್ಗೆ ಎಂಟ್ರಿ ಕೊಟ್ಟ ಇಡಿ ಅಧಿಕಾರಿಗಳು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇಡಿ ಅಧಿಕಾರಿಗಳು ಬೆಳಗಿನ ಜಾವ ನಾಲ್ಕು ವರೆ ಸುಮಾರಿಗೆ ಅವರ ಮನೆಯ ಪರಿಶೀಲನೆ ನಡೆಸಿದ್ದಾರೆ. ವೀರೇಂದ್ರ ಪಪ್ಪಿ ಮೇಲೆ ನಡೆದ ದಾಳಿಯೊಂದಿಗೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಎರಡು ಇನ್ನೋವಾ ಕಾರಿನಲ್ಲಿ ಬಂದ ಇಡಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಜೊತೆಯೇ ಆಗಮಿಸಿದ್ದಾರೆ. ಹನುಮಂತರಾಯಪ್ಪ ಪುತ್ರ ಜೊತೆಗೆ ವೀರಂದ್ರ ಪಪ್ಪಿ ವ್ಯವಹಾರ ಇರುವ ಮಾಹಿತಿ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗ್ತಿದೆ. ಸದ್ಯ ಹನುಮಂತರಾಯಪ್ಪ ನಿವಾಸದಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?