ನಿತ್ಯ ಸಾಸಿವೆಯನ್ನು ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ಆಗಸ್ಟ್ 29, 2025 - 07:02
 0  12
ನಿತ್ಯ ಸಾಸಿವೆಯನ್ನು ಸೇವಿಸೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ಅಡುಗೆಗೆ ಬಳಸುವಂತಹ ಹಲವಾರು ಸಾಂಬಾರ ಪದಾರ್ಥಗಳಲ್ಲಿ ಸಾಸಿವೆಯು ಒಂದು. ಇದು ನೋಡಲು ತುಂಬಾ ಸಣ್ಣದಾಗಿದ್ದರೂ ಇದರಲ್ಲಿ ಆರೋಗ್ಯ ಲಾಭಗಳು ಅಡಗಿವೆ. ಇದನ್ನು ಪ್ರತಿಯೊಂದು ಮನೆಯಲ್ಲೂ ಅಡುಗೆಗೆ ಬಳಕೆ ಮಾಡುವರು.

ಉತ್ತರ ಭಾರತೀಯರು ಅಡುಗೆಯಲ್ಲಿ ಬಳಕೆ ಮಾಡುವಂತಹ ಸಾಸಿವೆ ಎಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಇದನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದಾಗ ಖಂಡಿತವಾಗಿಯೂ ಅದರ ಲಾಭಗಳು ನಮ್ಮ ಆರೋಗ್ಯಕ್ಕೆ ಲಭ್ಯವಾಗುವುದು. ಸಾಸಿವೆ ಬಗ್ಗೆ ಇಂತಹ ಕೆಲವು ಆರೋಗ್ಯ ಲಾಭಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಅಡುಗೆಗೆ ಸಾಸಿವೆ ಕೇವಲ ರುಚಿ ಮಾತ್ರ ಕೊಡುವುದಲ್ಲದೆ, ಆರೋಗ್ಯಕ್ಕೆ ಈ ಪುಟ್ಟ ಕಾಳಿನಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದನ್ನು ಹಾಗೆಯೇ ತಿನ್ನಲಾಗುವುದಿಲ್ಲ. ಆದ್ದರಿಂದ ಎಣ್ಣೆಯಲ್ಲಿ ಒಗ್ಗರಣೆ ರೂಪದಲ್ಲಿ ತಿನ್ನಬಹುದು. ಅಲ್ಲದೆ ಸಾಸಿವೆ ಎಣ್ಣೆಯನ್ನೂ ಕೂಡಾ ಬಳಸಬಹುದಾಗಿದೆ.

ಸಾಸಿವೆಯನ್ನು ಬಳಸಿದ ಅಡುಗೆಯಲ್ಲಿ ರುಚಿ ಹೆಚ್ಚಿರುವುದರ ಜೊತೆಗೆ ಪರಿಮಳ ಕೂಡಾ ಹೆಚ್ಚಾಗಿರುತ್ತದೆ. ಆದ್ದರಿಂದ ಹೆಚ್ಚಾಗಿ ಅಡುಗೆಯಲ್ಲಿ ಬಳಸಲಾಗುತ್ತದೆ. ಹಲವಾರು ಪ್ರಯೋಜನಗಳನ್ನು ಹೊಂದಿರುವ ಈ ಪುಟ್ಟ ಕಾಳಿನಲ್ಲಿ ಏನೆಲ್ಲಾ ಪ್ರಯೋಜನಗಳಿವೆ. ಹೇಗೆ ಇದು ಆಹಾರದಲ್ಲಿ ಬಳಸಿದಲ್ಲಿ ನಮ್ಮ ದೇಹಕ್ಕೆ ಉಪಯೋಗವಾಗಬಹುದು. ಪ್ರತಿನಿತ್ಯ ಇದರ ಸೇವನೆಯು ಮೂಳೆಗಳಿಗೆ ಅತ್ಯುತ್ತಮ.

ದೊಡ್ಡವರಿಗಾಗಲಿ ಚಿಕ್ಕವರಿಗಾಗಲಿ ಮೂಳೆಗಳನ್ನು ಬಲ ಪಡಿಸಲು ಅವರ ಅಹಾರದಲ್ಲಿ ಸಾಸಿವೆಯನ್ನು ಉಪಯೋಗಿಸುವುದು ತುಂಬಾ ಒಳ್ಳೆಯದು. ಸಾಸಿವೆಯನ್ನು ಹಾಗೇ ಉಪಯೋಗಿಸಲು ಆಗುವುದಿಲ್ಲ. ಅದನ್ನು ಎಣ್ಣೆಯಲ್ಲಿ ಕರಿದಲ್ಲಿ ಮಾತ್ರ ಅದರ ರುಚಿ ಸಿಗುತ್ತದೆ. ಈ ಕಾಳು ಮೂಳೆಗಳನ್ನು ಬಲ ಪಡಿಸಲು ತುಂಬಾ ಉಪಯೋಗಕಾರಿಯಾದ ಇದರಲ್ಲಿ ಶಕ್ತಿವರ್ಧಕ ಗುಣಗಳು ಮತ್ತು ಖನಿಜಾಂಶಗಳು ಹೆಚ್ಚಾಗಿರುವುದರಿಂದ ಇದು ಆರೋಗ್ಯಕ್ಕೆ ಉತ್ತಮ ಪರಿಣಾಮಬೀರುತ್ತದೆ.

ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಇದು ಸಹಾಯಕಾರಿ. ಆದ್ದರಿಂದ ಅಡುಗೆಯಲ್ಲಿ ಸಾಸಿವೆಯನ್ನು ಬಳಸುವುದು ಅಥವಾ ಸಾಸಿವೆ ಎಣ್ಣೆಯನ್ನು ಕೂಡಾ ಬಳಸುವುದು ಪ್ರಯೋಜನಕಾರಿ. ಹಲವಾರು ಕಾಯಿಲೆಗಳಿಗೆ ರೋಗ ನಿರೋಧಕ ಶಕ್ತಿಯ ಅವಶ್ಯಕತೆಯಿದೆ . ಈ ರೋಗ ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚು ಮಾಡಲು ಸಾಸಿವೆಯು ಸಹಾಯಕಾರಿ.
ಕೂದಲಿನ ಆರೋಗ್ಯಕ್ಕೆ : ಕೂದಲು ಉದುರುವಿಕೆ , ತಲೆಹೊಟ್ಟಿನಂತ ಸಮಸ್ಯೆಯನ್ನು ಹೋಗಲಾಡಿಸಿ ಕೂದಲು ದಟ್ಟವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.

ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಗಟ್ಟುವಲ್ಲಿಯೂ ಕೂಡಾ ಸಾಸಿವೆಯು ಪಾತ್ರವಹಿಸುತ್ತದೆ. ಹೀಗೆ ಹಲವಾರು ಸಮಸ್ಯೆಗಳನ್ನು ತಡೆಗಟ್ಟಲು ಅಥವಾ ಸಮಸ್ಯೆಗಳನ್ನು ನಿವಾರಿಸುವಲ್ಲಿ ಈ ಸಾಸಿವೆಯು ಪ್ರಮುಖ ಪಾತ್ರವಹಿಸುತ್ತದೆ.

ಒಸಡುಗಳು, ಹಲ್ಲುಗಳು ಮತ್ತು ನಾಲಗೆ ಆರೋಗ್ಯಕ್ಕೆ ಇದು ಇದು ಸಹಾಯಕಾರಿ. ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತಾ ಹಲ್ಲುಗಳು ಗಟ್ಟಿಯಾಗುವಂತೆ ಮಾಡಲು ಇದು ಸಹಕಾರಿ. ಅದರಲ್ಲೂ ಮಕ್ಕಳ ಹಲ್ಲುಗಳ ರಕ್ಷಣೆಯಲ್ಲಿ ಇದು ಮಹತ್ತರ ಪಾತ್ರವಹಿಸುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow