ED Raid: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕನಿಗೆ ಬಿಗ್‌ ಶಾಕ್..!‌ ಚಿತ್ರದುರ್ಗ ನಿವಾಸ ಸೇರಿದಂತೆ 16 ಕಡೆ ದಾಳಿ!

ಆಗಸ್ಟ್ 22, 2025 - 10:56
 0  15
ED Raid: ಬೆಳ್ಳಂಬೆಳಗ್ಗೆ  ಕಾಂಗ್ರೆಸ್ ಶಾಸಕನಿಗೆ ಬಿಗ್‌ ಶಾಕ್..!‌ ಚಿತ್ರದುರ್ಗ ನಿವಾಸ ಸೇರಿದಂತೆ 16 ಕಡೆ ದಾಳಿ!

ಚಿತ್ರದುರ್ಗ: ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ನಿವಾಸಕ್ಕೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂಚು-ಇಂಚಾಗಿ ಪರಿಶೀಲನೆ ನಡೆಸುತ್ತಿರುವ ಸುದ್ದಿ ಲಭ್ಯವಾಗಿದೆ.

ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಪ್ರಕರಣದ ಹಿನ್ನಲೆಯಲ್ಲಿ ದಾಳಿ ನಡೆದಿದ್ದು, ಚಳ್ಳಕೆರೆ ನಗರದಲ್ಲಿನ ಶಾಸಕ ವೀರೇಂದ್ರ ಪಪ್ಪಿಯ ಮನೆ ಜೊತೆಗೆ ಅಣ್ಣ ಕೆ.ಸಿ. ನಾಗರಾಜ್, ಕೆ.ಸಿ. ಸ್ವಾಮಿ ಮನೆಗಳ ಮೇಲೂ ಶೋಧ ಕಾರ್ಯ ನಡೆದಿದೆ. ಚಿತ್ರದುರ್ಗ ಹಳೆಯ ಟೌನ್ ವೀರಭದ್ರ ಸ್ವಾಮಿ ದೇವಸ್ಥಾನ ಬಳಿಯ ನಿವಾಸದಲ್ಲಿ ವಿಶೇಷ ಶೋಧ ನಡೆಯುತ್ತಿರುವಂತೆ ತಿಳಿದು ಬಂದಿದೆ.

ಚಿತ್ರದುರ್ಗದ ಚಳ್ಳಕೆರೆಯಲ್ಲಿನ ಪಪ್ಪಿ ನಿವಾಸದ ಜೊತೆಗೆ, ಬೆಂಗಳೂರಿನ ವಸಂತನಗರದಲ್ಲಿರುವ ನಿವಾಸಕ್ಕೂ ದಾಳಿ ನಡೆಸಲಾಗಿದೆ. ಪ್ರಸ್ತೀಜ್ ಅಪಾರ್ಟ್ಮೆಂಟ್ ನಲ್ಲಿ ನಿವಾಸ ಹೊಂದಿರುವ ಶಾಸಕ ದಾಳಿ ವೇಳೆ ಸ್ಥಳದಲ್ಲಿರಲಿಲ್ಲ; ಅವರು ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.

ಮನೆ ಸುತ್ತಲೂ ಭದ್ರತಾ ಪಡೆಯನ್ನ ಅಲರ್ಟ್ ಮಾಡಲಾಗಿದೆ. 7 ಖಾಸಗಿ ವಾಹನಗಳಲ್ಲಿ ಇಡಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಳ್ಳಕೆರೆ ನಗರದಲ್ಲಿನ ಶಾಸಕ ಕೆಸಿ ವೀರೇಂದ್ರ ಪಪ್ಪಿ ನಿವಾಸಕ್ಕೆ ಬಂದು ರೇಡ್ ಮಾಡಿದ್ದಾರೆ. ಶಾಸಕನ ಮನೆಯಲ್ಲಿ ತೀವ್ರ ಶೋಧ ನಡೆಸಲಾಗಿದೆ ಎಂದು ವರದಿ ಆಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow