Glenn Maxwell Retirement: ಏಕದಿನ ಕ್ರಿಕೆಟ್’ಗೆ ಗುಡ್ ಬೈ ಹೇಳಿದ ಸ್ಟಾರ್ ಆಲ್ ರೌಂಡರ್..! ಕಾರಣವೇನು..?

ಜೂನ್ 2, 2025 - 13:57
 0  8
Glenn Maxwell Retirement: ಏಕದಿನ ಕ್ರಿಕೆಟ್’ಗೆ ಗುಡ್ ಬೈ ಹೇಳಿದ ಸ್ಟಾರ್ ಆಲ್ ರೌಂಡರ್..! ಕಾರಣವೇನು..?

ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಏಕದಿನ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದು, ಟಿ20 ಪಂದ್ಯಗಳತ್ತ ಗಮನ ಹರಿಸಿದ್ದಾರೆ. 2012 ರಿಂದ 2025 ರವರೆಗಿನ ವೃತ್ತಿಜೀವನದಲ್ಲಿ, ಮ್ಯಾಕ್ಸ್ವೆಲ್ 149 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 3990 ರನ್ಗಳನ್ನು ಗಳಿಸಿದ್ದಾರೆ ಮತ್ತು 77 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 2015 ಮತ್ತು 2023 ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದ ತಂಡಗಳ ಭಾಗವಾಗಿದ್ದರು.

36 ವರ್ಷದ ಗ್ಲೆನ್ ಮ್ಯಾಕ್ಸ್ವೆಲ್‌ 2025 ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ನಿವೃತ್ತಿ ನಿರ್ಧಾರಕ್ಕೆ ಬಂದರು. ದುಬೈನಲ್ಲಿ ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೋತ ನಂತರ ಅವರು ನಿವೃತ್ತಿ ನಿರ್ಧಾರ ಮಾಡಿದರು.

ಚಾಂಪಿಯನ್ಸ್ ಟ್ರೋಫಿ ವೇಳೆ ಆಸ್ಟ್ರೇಲಿಯಾದ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿಯನ್ನು ಭೇಟಿಯಾಗಿ ತಮ್ಮ ನಿರ್ಧಾರವನ್ನು ತಿಳಿಸಿದರು ಎಂದು ಮ್ಯಾಕ್ಸ್ ವೆಲ್ ಹೇಳಿದ್ದಾರೆ. ಮುಂಬರುವ 2026 T20 ವಿಶ್ವಕಪ್ ಮತ್ತು ಬಿಗ್ ಬ್ಯಾಷ್ ಲೀಗ್ನಲ್ಲಿ ಆಡುವ ಆಸಕ್ತಿಯಿಂದ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ನಿವೃತ್ತಿಯ ಬಗ್ಗೆ ಮಾತನಾಡಿದ ಮ್ಯಾಕ್ಸ್ವೆಲ್, ‘ನನ್ನ ಸಮಯಕ್ಕಿಂತ ಮುಂಚೆಯೇ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದೆ. ಆಸ್ಟ್ರೇಲಿಯಾ ತಂಡಕ್ಕೆ ಆಡಲು ಅವಕಾಶ ಸಿಕ್ಕಿದ್ದಕ್ಕೆ ಹೆಮ್ಮೆ ಇದೆ. ನಾನು ಕೆಲವು ಪಂದ್ಯಗಳನ್ನು ಮಾತ್ರ ಆಡುತ್ತೇನೆ ಎಂದು ಅಂದುಕೊಂಡಿದ್ದೆ. ಕೆಲ ಸಮಯದ ನಂತರ ನಾನು ತಂಡದಿಂದ ಹೊರಗುಳಿಯಬೇಕಾಗಿ ಬಂತು. ಆದರೆ ಮತ್ತೆ ತಂಡಕ್ಕೆ ಬಂದೆ. ವಿಶ್ವಕಪ್ಗಳಲ್ಲೂ ಆಡಿದೆ. ಶ್ರೇಷ್ಠ ತಂಡಗಳ ಭಾಗವಾಗಿದ್ದೆ. ಜತೆಗೆ ಏರಿಳಿತಗಳನ್ನೂ ಕಂಡಿದ್ದೇನೆʼ ಎಂದು ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow