Gold Price Drops: ಅಬ್ಬಾ.. ಕೊನೆಗೂ ಚಿನ್ನದ ಬೆಲೆ ಇಳಿಕೆ! 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ..?

ಅಕ್ಟೋಬರ್ 27, 2025 - 12:01
 0  19
Gold Price Drops: ಅಬ್ಬಾ.. ಕೊನೆಗೂ ಚಿನ್ನದ ಬೆಲೆ ಇಳಿಕೆ! 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಗೊತ್ತಾ..?

ಚಿನ್ನ ಖರೀದಿಗೆ ವಿಶೇಷ ದಿನ ಬೇಕಾಗಿಲ್ಲ ಏಕೆಂದರೆ ಬಂಗಾರದ ಮಹತ್ವ ಅಂತಹದ್ದಾಗಿದೆ. ಬಂಗಾರವಿದ್ದರೆ ಆಪತ್ತಿಗೆ ಆದೀತು ಎಂದು ಚಿನ್ನಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನದ ಸ್ಕೀಮ್‌ಗೆ ಸೇರಿಕೊಂಡು ತಿಂಗಳಿಗೆ ಇಷ್ಟಿಷ್ಟು ದುಡ್ಡು ಹಾಕಿ ಚಿನ್ನ ಖರೀದಿಸಿ ಎತ್ತಿಟ್ಟುಕೊಳ್ಳುತ್ತಿದ್ದಾರೆ. ಚಿನ್ನ ಖರೀದಿಗೂ ಮುನ್ನ ಒಮ್ಮೆ ಬೆಲೆಯ ಬಗ್ಗೆ ತಿಳಿದುಕೊಳ್ಳೋಣ.

ಅಕ್ಟೋಬರ್ 27 ರಂದು ಸೋಮವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,448 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,24,480 ರೂಪಾಯಿ ಇದೆ. 24 ಕ್ಯಾರೆಟ್ ಬೆಲೆಯಲ್ಲಿ 1140 ರೂ ಇಳಿಕೆ ಆಗಿದೆ.22 ಕ್ಯಾರೆಟ್ 1 ಗ್ರಾಂ ಬೆಲೆ 11,410 ರೂಪಾಯಿ ಇದ್ದು, 10 ಗ್ರಾಂ ಬೆಲೆ 1,14,100 ರೂಪಾಯಿ ಇದೆ. ಸೋಮವಾರ 1050 ರೂ ಇಳಿಕೆ ಆಗಿದೆ.

ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12448 ರೂಪಾಯಿ ಇದ್ದು, 10 ಗ್ರಾಂ ಶುದ್ಧ ಚಿನ್ನಕ್ಕೆ 1,24,480 ರೂಪಾಯಿ ಇದೆ. ಈ ಬೆಲೆಯಲ್ಲಿ ಜಿಎಸ್‌ಟಿ ಸೇರಿಲ್ಲ, ಹೀಗಾಗಿ ಮಳಿಗೆಗಳಲ್ಲಿ ವ್ಯತ್ಯಾಸ ಇರಲಿದೆ.

ಬೆಳ್ಳಿ ಬೆಲೆ ಭರ್ಜರಿ ಇಳಿಕೆ

ಬೆಳ್ಳಿ ಬೆಲೆ ಇಂದು 1 ಗ್ರಾಂ ಬೆಲೆ 157 ರೂ ಇದ್ದು, ಕೆಜಿಗೆ 1,57,000 ರೂ ಇದೆ.

ಬೆಳ್ಳಿಗೂ ಒಳ್ಳೆಯ ಬೇಡಿಕೆ ಇದ್ದು, ಬೆಳ್ಳಿ ಖರೀದಿದಾರರು ಕೂಡ ಬೆಲೆ ಕಡಿಮೆಯಾದಂತೆ ಬೆಳ್ಳಿಯ ಪರ್ಚೇಸ್‌ಗೆ ಮುಂದಾಗುತ್ತಾರೆ. ಬೆಳ್ಳಿಯ ಸಾಕಷ್ಟು ಆಭರಣಗಳು ಇಂದು ಸ್ಟೈಲಿಶ್ ಆಗಿ ಮಾರುಕಟ್ಟೆಗೆ ಕಾಲಿಡುತ್ತಿವೆ. ಬೆಳ್ಳಿಗೂ ಒಳ್ಳೆಯ ಬೇಡಿಕೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow