Gold Rate: ಅಕ್ಷಯ ತೃತೀಯಕ್ಕೂ ಮುಂಚೆ ಬಂಗಾರಕ್ಕೆ ಭಾರೀ ಬೇಡಿಕೆ: 1 ಲಕ್ಷ ರೂ. ಗಡಿ ದಾಟಿದ ಚಿನ್ನದ ದರ! ತೀವ್ರ ಬೆಲೆ ಏರಿಕೆಗೆ ಕಾರಣವೇನು?

ಎಪ್ರಿಲ್ 22, 2025 - 21:08
 0  10
Gold Rate: ಅಕ್ಷಯ ತೃತೀಯಕ್ಕೂ ಮುಂಚೆ ಬಂಗಾರಕ್ಕೆ ಭಾರೀ ಬೇಡಿಕೆ: 1 ಲಕ್ಷ ರೂ. ಗಡಿ ದಾಟಿದ ಚಿನ್ನದ ದರ! ತೀವ್ರ ಬೆಲೆ ಏರಿಕೆಗೆ ಕಾರಣವೇನು?

ಬೆಂಗಳೂರು: ಸದ್ಯ ಬಂಗಾರ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಸಾಮಾನ್ಯವಾಗಿ ಮಹಿಳೆಯರನ್ನು ಬಲು ಆಕರ್ಷಿಸುವ ಈ ಚಿನ್ನವನ್ನು ಕೊಳ್ಳಬೇಕೆಂದರೆ ಈಗ ಜೇಬುಗಳು ಸಹ ಭಾರವಾಗಿರಬೇಕು. ಈಗ ಜೇಬುಗಳು ಸಹ ಭಾರವಾಗಿರಬೇಕು. ಹೌದು, ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿರುವ ಅಪರೂಪದ ಹಳದಿ ಲೋಹ ದಿನಗಳೆದಂತೆ ತುಟ್ಟಿಯಾಗುತ್ತಲೇ ಹೋಗುತ್ತಿದೆ.

ಚಿನ್ನ ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಕಣ್ಣಿಗೆ ಫಳ ಫಳ ಎಂದು ರಾಚಿಸುವ ಈ ಹಳದಿ ಬಣ್ಣದ ಅಪರೂಪದ ಲೋಹ ಕೇವಲ ಇಂದು ನಿನ್ನೆಯಲ್ಲ ಬದಲಾಗಿ ಅತಿ ಪ್ರಾಚೀನ ಕಾಲದಿಂದಲೂ ಪ್ರಾಮುಖ್ಯತೆ ಹೊಂದಿರುವ ಲೋಹವಾಗಿದೆ.

ಇದೀಗ ನಿನ್ನೆ ಗ್ರಾಮ್​​ಗೆ 70 ರೂ ಹೆಚ್ಚಿದ್ದ ಅದರ ಬೆಲೆ ಇವತ್ತು ಬರೋಬ್ಬರಿ 275 ರೂನಷ್ಟು ಏರಿಕೆ ಕಂಡಿದೆ. ಅಪರಂಜಿ ಚಿನ್ನವಂತೂ ಗ್ರಾಮ್​​ಗೆ 300 ರೂನಷ್ಟು ಹೆಚ್ಚಳವಾಗಿದೆ. 24 ಕ್ಯಾರಟ್ ಚಿನ್ನದ ಬೆಲೆ ಇದೇ ಮೊದಲ ಬಾರಿಗೆ 10,000 ರೂ ಗಡಿ ದಾಟಿದೆ. ಬೆಂಗಳೂರಿನಲ್ಲಿ ಈ ಶುದ್ಧ ಚಿನ್ನದ ಬೆಲೆ ಗ್ರಾಮ್​​ಗೆ 10,135 ರೂ ಬೆಲೆ ಪಡೆದಿದೆ. ಆಭರಣ ಚಿನ್ನದ ಬೆಲೆ ಭಾರತದಲ್ಲಿ ಮೊದಲ ಬಾರಿಗೆ 9,300 ರೂ ಗಡಿ ದಾಟಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ದಾಖಲೆ ಬರೆದಿದೆ.

 ಅಮೆರಿಕ ಸೇರಿದಂತೆ ಎಲ್ಲಾ ದೇಶಗಳಲ್ಲೂ ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲಿಸಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 92,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,01,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 92,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,100 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 22ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 76,010 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 92,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 92,900 ರೂ
  • ಚೆನ್ನೈ: 92,900 ರೂ
  • ಮುಂಬೈ: 92,900 ರೂ
  • ದೆಹಲಿ: 93,050 ರೂ
  • ಕೋಲ್ಕತಾ: 92,900 ರೂ
  • ಕೇರಳ: 92,900 ರೂ
  • ಅಹ್ಮದಾಬಾದ್: 92,950 ರೂ
  • ಜೈಪುರ್: 93,050 ರೂ
  • ಲಕ್ನೋ: 93,050 ರೂ
  • ಭುವನೇಶ್ವರ್: 92,900 ರೂ

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow