Google Maps Error: ಗೂಗಲ್ ಮ್ಯಾಪ್ ಎಡವಟ್ಟು: ಕಂದಕಕ್ಕೆ ಉರುಳಿದ ಕಾರು – ಮುಂದೇನಾಯ್ತು..?
ಮುಂಬೈ: ಡಿಜಿಟಲ್ ಯುಗದಲ್ಲಿ ದಿಕ್ಕು ತೋರಿಸಲು ಬಹುಪಾಲು ಜನರು ನಂಬುತ್ತಿರುವ ಗೂಗಲ್ ಮ್ಯಾಪ್ ಈಗ ಜೀವಕ್ಕೆ ಅಪಾಯ ತಂದೊಡ್ಡಿದ ಘಟನೆ ನವಿ ಮುಂಬೈನಲ್ಲಿ ನಡೆದಿದೆ. ಬೇಲಾಪುರ ಸೇತುವೆ ಮೂಲಕ ಉಲ್ವೆ ಕಡೆಗೆ ಹೋಗುತ್ತಿದ್ದ ಮಹಿಳೆ, ಗೂಗಲ್ ಮ್ಯಾಪ್ ತೋರಿಸಿದ ದಾರಿಗೆ ಅನುಸಾರವಾಗಿ ಕಾರು ಹಾರಿಸಿದ್ದಾಗ, ತಪ್ಪು ತಿರುವಿನಲ್ಲಿ ಕಾರು ನದಿಗೆ ಉರುಳಿದೆ.
ಘಟನೆ ನಡೆದ ಸಂದರ್ಭದಲ್ಲಿ ಮಹಿಳೆ ಕಾರು ಚಾಲನೆ ಮಾಡುತ್ತಿದ್ದು, ಗೂಗಲ್ ಮ್ಯಾಪ್ ಸೂಚಿಸಿದ ದಾರಿಯಂತೆ ತಿರುವು ತೆಗೆದುಕೊಂಡಾಗ ಸೇತುವೆಯಿಂದ ನದಿಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಮಹಿಳೆ ಸುರಕ್ಷಿತವಾಗಿದ್ದು, ತಕ್ಷಣವೇ ಕೋಸ್ಟ್ ಗಾರ್ಡ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ. ನದಿಗೆ ಬಿದ್ದ ಕಾರನ್ನು ನಂತರದಲ್ಲಿ ಕ್ರೇನ್ ಮೂಲಕ ಹೊರತೆಗೆಯಲಾಯಿತು. ಈ ಘಟನೆಯಿಂದಾಗಿ ಡಿಜಿಟಲ್ ಉಪಕರಣಗಳ ಅವಲಂಬನೆಯ ಕುರಿತು ಮತ್ತೆ ಚರ್ಚೆ ಶುರುವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?