Happy Fathers Day 2025: ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತೆ? ಇದರ ಮಹತ್ವವನ್ನು ತಿಳಿದುಕೊಳ್ಳಿ!

ಜೂನ್ 15, 2025 - 07:00
 0  5
Happy Fathers Day 2025: ವಿಶ್ವ ಅಪ್ಪಂದಿರ ದಿನಾಚರಣೆಯನ್ನು ಏಕೆ ಆಚರಿಸಲಾಗುತ್ತೆ? ಇದರ ಮಹತ್ವವನ್ನು  ತಿಳಿದುಕೊಳ್ಳಿ!

ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ. ಆದರೆ ಇದ್ಯಾವುದಕ್ಕೂ ತಂದೆ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಅಪ್ಪನ ಪ್ರೀತಿ, ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಜೂನ್ 15 ಅನ್ನು ತಂದೆಯ ದಿನವೆಂದು ಆಚರಿಸಲಾಗುತ್ತದೆ. ಅಪ್ಪಂದಿರು ದೇವರಿಂದ ಬಂದ ದೊಡ್ಡ ಕೊಡುಗೆ; ಆದ್ದರಿಂದ, ಅದ್ಭುತ ಮನುಷ್ಯನನ್ನು ಗೌರವಿಸಲು ದಿನವನ್ನು ಆಚರಿಸಲಾಗುತ್ತದೆ

20ನೇ ದಶಕದಲ್ಲಿ ಫಾದರ್ಸ್ಡೇ ಅನ್ನು ಅಮೆರಿಕಾದಲ್ಲಿ ಆಚರಿಸಲಾಗಿತ್ತು. ವಾಷಿಂಗ್ಟನ್ ಸ್ಪೋಕೇನ್ ಸೊನೊರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆ ಮೊದಲ ಬಾರಿಗೆ ತನ್ನ ತಂದೆಗೆ ಗೌರವ ಸೂಚಿಸಿದಳು. ಪ್ರತಿ ವರ್ಷ ಮದರ್ಸ್ಡೇ ಆಚರಿಸುತ್ತಿರುವ ನಾವು ಫಾದರ್ಸ್ಡೇಯನ್ನು ಏಕೆ ಆಚರಿಸಬಾರದು ಎಂದು ಧ್ವನಿ ಎತ್ತಿದರು. ತನ್ನ ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿ, ತಾಯಿ ಇಲ್ಲದ ಆರು ಮಕ್ಕಳನ್ನು ತಂದೆ ವಿಲಿಯಂ ಜಾಕ್ಸನ್ ಸ್ಮಾರ್ಟ್ ಬೆಳೆಸಿದ್ದಾರೆ. ಹಾಗಾಗಿ ತನ್ನ ತಂದೆಗೆ  ಸೂಕ್ತವಾದ ಗೌರವವನ್ನು ನೀಡಬೇಕು ಎಂದು ಭಾವಿಸಿ,  1910ರಲ್ಲಿ ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಿದರು. ನಂತರ 1972ರಲ್ಲಿ ಅಧ್ಯಕ್ಷ ರಿಚರ್ಡ್ನಿಕ್ಸನ್ತಂದೆಯ ದಿನಾಚರಣೆ ಆಚರಿಸುವಂತೆ ಘೋಷಿಸಿದ ನಂತರ ಅಮೇರಿಕದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತು.

ಅಮೆರಿಕಾದಲ್ಲಿ ರಾಷ್ಟ್ರೀಯ ರಜಾದಿನ

ಫಾದರ್ಸ್ಡೇ ಆಚರಣೆ ಬಗ್ಗೆ 1972 ರವರೆಗೂ ಸರ್ಕಾರ ಅಧಿಕೃತವಾಗಿ ಘೋಷಿಸಿರಲಿಲ್ಲ. ಆದರೆ ನಂತರ ಆಗಿನ ಯುಎಸ್ ಅಧ್ಯಕ್ಷ ರಿಚರ್ಡ್ ನಿಕ್ಸನ್ ಇದನ್ನು ಅಧಿಕೃತಗೊಳಿಸಿದರುಜೂನ್ ತಿಂಗಳ ಮೂರನೇ ಭಾನುವಾರವನ್ನುಅಪ್ಪಂದಿರ ದಿನವನ್ನಾಗಿ ಆಚರಿಸುವಂತೆ ಸೂಚಿಸಿದರು ದಿನದಂದು ರಾಷ್ಟ್ರೀಯ ರಜಾದಿನವನ್ನಾಗಿ ಕೂಡ ಘೋಷಿಸಿದರುಅಂದಿನಿಂದ, ಪ್ರತಿ ವರ್ಷ ಅಮೆರಿಕದಲ್ಲಿ ಫಾದರ್ಸ್ಡೇ ಅನ್ನು ಅಧಿಕೃತವಾಗಿ ಆಚರಿಸಲಾಗುತ್ತಿದೆ. ಅದೇ ರೀತಿ ಭಾರತದಲ್ಲಿಯೂ ದಿನದಂದು ಫಾದರ್ಸ್ಡೇ ಸೆಲೆಬ್ರೆಟ್ಮಾಡಲಾಗುತ್ತಿದೆ.

ತಂದೆಯ ದಿನಾಚರಣೆ ಏಕೆ ಮುಖ್ಯ?

ತಂದೆಯನ್ನು ಸಂತೋಷಪಡಿಸಲು ಮತ್ತು ತಂದೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಸಲುವಾಗಿ ಫಾದರ್ಸ್ಡೇ ಆಚರಿಸಲಾಗುತ್ತದೆ ದಿನವನ್ನು ತಂದೆಯೊಂದಿಗೆ ಸಂತೋಷದಿಂದ ಕಳೆಯುವುದು ಮತ್ತು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದರಿಂದ ತಂದೆ-ಮಕ್ಕಳ ಬಾಂಧವ್ಯ ಗಟ್ಟಿಯಾಗುತ್ತದೆಇದಲ್ಲದೇ, ಕುಟುಂಬ ಸದಸ್ಯರೆಲ್ಲಾರೂ ಒಟ್ಟಿಗೆ ಸೇರಲು ಅವಕಾಶ ಸಿಗುತ್ತದೆಇದಲ್ಲದೇ, ಆಚರಣೆಯು ಮಕ್ಕಳ ಜೀವನದಲ್ಲಿ ತಂದೆಯ ಪಾತ್ರವನ್ನು ಪ್ರತಿಬಿಂಬಿಸುತ್ತದೆಅಪ್ಪಂದಿರ ದಿನ ಆಚರಣೆಗೆ ಮಾತ್ರ ಸೀಮಿತವಾಗಿಲ್ಲತಂದೆಯ ಮಹತ್ವವನ್ನು ಸಾರುವ ಹಬ್ಬಅಪ್ಪನ ಅನುಭವದ ಪಾಠ ಕಲಿಯಲು ಉತ್ತಮ ವೇದಿಕೆಆದ್ದರಿಂದ, ಫಾದರ್ಸ್ಡೇ ಯಂದು, ತಂದೆ ಮಾಡಿದ ತ್ಯಾಗವನ್ನು ಸ್ಮರಿಸೋಣತಂದೆಯನ್ನು ಆದರ್ಶವಾಗಿಟ್ಟುಕೊಂಡು ಜೀವನವನ್ನು ನಡೆಸೋಣ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow